Sunday, September 6, 2026
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ. ಕಾಪು ತಾಲೂಕು ಪಡುಬಿದ್ರಿ ವಲಯದ ಅದಮಾರು ಕಾರ್ಯಕ್ಷೇತ್ರ ದ ಸಹಯೋಗದಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ -ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ. ಕಾಪು ತಾಲೂಕು ಪಡುಬಿದ್ರಿ ವಲಯದ ಅದಮಾರು ಕಾರ್ಯಕ್ಷೇತ್ರ ದ ಸಹಯೋಗದಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ವನ್ನು ಕೆಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಲ್ಲೂರು ಇಲ್ಲಿ ನಡೆಸಲಾಯಿತು..

ಜಾಹೀರಾತು

ಕಾರ್ಯಕ್ರಮ ದ ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಜಗನಾಥ್ ಶೆಟ್ಟಿ ವಹಿಸಿದ್ದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀಯುತ ಕೃಷ್ಣಾನಂದ ರಾವ್ ರವರು ಉದ್ಘಾಟನೆ ಮಾಡಿದರು. ತಾಲೂಕಿನ ಕೃಷಿ ಮೇಲ್ವಿಚಾರಕರಾದ ದೇವೇಂದ್ರ ರವರು ಮಕ್ಕಳಿಗೆ ಪರಿಸರ ಸಂರಕ್ಷಣೆ,ನೈಸರ್ಗಿಕ ವಾಗಿ ಸಿಗುವ ಗಾಳಿ ನೀರು ಭೂಮಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಹೆಚ್ಚು ಮರಗಳನ್ನು ನೆಡುವುದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು
ಹಾಗೂ ಪರಿಸರದಿಂದ ನಮಗೆ ಏನೆಲ್ಲಾ ಪ್ರಯೋಜನ ವಿದೆ ಎಂಬುದನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಗೆ ಕೆಲವು ಔಷಧಿಯ ಗಿಡಗಳಾದ ದೊಡ್ಡ ಪತ್ರೆ, ನೆಲನೆಲ್ಲಿ ,ಅಮೃತಬಳ್ಳಿ, ಲಕ್ಷ್ಮಣ್ ಫಲ, ಸೀತಾಫಲ, ಎಲೆ ಗುರುತಿಸುವಿಕೆ ಕಾರ್ಯಕ್ರಮ ಮಾಡಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶಿಕ್ಷಕರಾದ ಸುನೀತ್ ಎಸ್ ಎಲ್ಲರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮ ದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಕಾಶ ಆಚಾರ್ಯ, ಶ್ರೀಮತಿ ಜಯ ಮೇಲ್ವಿಚಾರಕರಾದ ಜಗದೀಶ್ ರವರು,ಅದಮಾರು ಸೇವಾ ಪ್ರತಿನಿಧಿಯಾದ ಶ್ರೀಮತಿ ಪಾರ್ವತಿ, ಹಾಗೂ ಶಾಲಾ ಶಿಕ್ಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.