
ಖ್ಯಾತ ನಟಿ ಸ್ವಾತಿ ರೆಡ್ಡಿ ಅವರು ನಿರ್ದೇಶಕ ಶ್ರೀಕಾಂತ್ ನಾಗೋಟಿ ಜೊತೆ ಹಸೆಮಣೆ ಏರಿದ್ದಾರೆ.ʼಡೇಂಜರ್ʼ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಕಲರ್ಸ್ ಸ್ವಾತಿ ಎಂದೇ ಹೆಸರುವಾಸಿಯಾಗಿದ್ದ ನಟಿ ಸ್ವಾತಿ ರೆಡ್ಡಿ ಇತ್ತೀಚೆಗಷ್ಟೇ ಪೈಲಟ್ ಪತಿ ವಿಕಾಸ್ ವಸು ಜೊತೆಗಿನ ಮದುವೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಆಶ್ಚರ್ಯಕರ ರೀತಿಯಲ್ಲಿ ಇನ್ನೊಂದು ಮದುವೆಯಾಗಿದ್ದಾರೆ. ಅವರ ಬಾಳಸಂಗಾತಿ ಸಿನಿಮಾ ನಿರ್ದೇಶಕ ಅನ್ನೋದೇ ವಿಶೇಷ.
ಕಲರ್ಸ್ ಸ್ವಾತಿ ಇದೀಗ ಶ್ರೀಕಾಂತ್ ನಾಗೋಟಿ ಜೊತೆ ವಿವಾಹವಾಗಿದ್ದಾರೆ. ಮನೆಯಲ್ಲೇ ಸರಳ ವಿವಾಹವಾಗಿದ್ದು, ಮದುವೆಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ನಾಗೋಟಿಯನ್ನು ಕೊಲಾಬರೇಟ್ ಮಾಡಿದ್ದಾರೆ. 2023ರಲ್ಲಿ ಸ್ವಾತಿ ಜೊತೆ `ಮಂತ್ ಆಫ್ ಮಧು’ ಚಿತ್ರ ಮಾಡಿದ್ದ ಶ್ರೀಕಾಂತ್ ನಾಗೋಟಿ ಇದೀಗ ಸ್ವಾತಿಗೆ ಪತಿಯಾಗಿದ್ದಾರೆ.









