ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷ ಹಾವುಗಳು ನಾಪತ್ತೆ : ನೀರಿಗೆ ಇಳಿಯಬೇಡಿ, ಜನರಿಗೆ ಸೂಚನೆ -ಕಹಳೆ ನ್ಯೂಸ್

ಬೀಜಿಂಗ್: ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಇದರ ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ 900ಕ್ಕೂ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.
ಪ್ರವಾಹದಿಂದ ಗುವಾಂಗ್ಕ್ಸಿ ಸುತ್ತಲಿನ ಗ್ರಾಮಗಳು ಜಲಾವೃತವಾಗಿವೆ. ಕೆರೆಯಂತೆ ಕಾಣುತ್ತಿರುವ ಹಳ್ಳಿಗಳಲ್ಲಿ ಹಾವುಗಳು ಎಲ್ಲಡೆ ಕಾಣಿಸಿಕೊಳ್ಳುತ್ತಿವೆ. ನೀರಿನಲ್ಲಿ ಗ್ರಾಮಗಳೊಳಗೆ ಈಜಾಡುತ್ತಿರುವ ವಿಷಸರ್ಪಗಳು ಜನರಲ್ಲಿ ಭಾರೀ ಆತಂಕ ಮೂಡಿಸಿವೆ. ಈಗಾಗಲೇ ಹಲವರಿಗೆ ವಿಷಸರ್ಪಗಳು ಕಚ್ಚಿದ ಘಟನೆಗಳೂ ವರದಿಯಾಗಿವೆ.
ಪ್ರವಾಹದಿಂದ ತಳಿ ಸಾಕಣೆ ಕೇಂದ್ರಗಳ ಬೇಲಿಗಳು ಒಡೆದಿದ್ದು, ನಾಗರಹಾವು ಸೇರಿ ಹಲವು ವಿಷಕಾರಿ ಹಾವುಗಳು ಹೊರಬಂದಿವೆ. ರಸ್ತೆಗಳು, ಗ್ರಾಮಗಳು ಮತ್ತು ಪ್ರವಾಹದ ನೀರಿನಲ್ಲಿ ಹಾವುಗಳು ಈಜಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಾವು ಕಡಿತಕ್ಕೆ ಸಾವನ್ನಪ್ಪಿರುವವ ಘಟನೆಯೂ ಸಹ ನಡೆದಿದೆ.









