Friday, July 10, 2026
ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿವೇಕಾನಂದ ಪದವಿ ಕಾಲೇಜು ಘಟಕ ಹಾಗೂ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು ನೆಹರು ನಗರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ 78ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ -ಕಹಳೆ ನ್ಯೂಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿವೇಕಾನಂದ ಪದವಿ ಕಾಲೇಜು ಘಟಕ ಹಾಗೂ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು ನೆಹರು ನಗರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ 78ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು . ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇಲ್ಲಿನ ಅಧ್ಯಕ್ಷರು ಆಗಿರುವ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ “ವಿದ್ಯಾರ್ಥಿ ಪರಿಷತ್ ಒಂದು ರಾಷ್ಟ್ರೀಯವಾದಿ ಸಂಘಟನೆ , ಯಾವುದೇ ಒಂದು ದೇಶ ಮುನ್ನಡೆಯಬೇಕಾದರೆ ಆ ದೇಶದ ತರುಣ ಶಕ್ತಿಯು ಸದೃಢವಾಗಿರಬೇಕು” ಎಂದರು . ಮಂಗಳೂರು ವಿಭಾಗ ಸಂಚಾಲಕರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿಗಳಾದ ಶ್ರೀ ಸುವಿತ್ ಶೆಟ್ಟಿ ಪ್ರಾಸ್ತಾವಿಕ ನುಡಿದು “ಸಂಘಟನೆ ಬೆಳೆದುಬಂದ ಹಾದಿ ಹಾಗೂ ಸ್ವಾತಂತ್ರದ ಸಂದರ್ಭದಲ್ಲಿ ಯುವಕರ ಪಾತ್ರವನ್ನು ನೆನಪಿಸಿದರು”, ಪುತ್ತೂರು ಜಿಲ್ಲಾ ಸಂಚಾಲಕರಾದ ಚರಣ್ ರಾಜ್ ಸ್ವಾಗತಿಸಿದರು , ಅಭಾವಿಪ ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ , ಕಾಲೇಜಿನ ಸಂಚಾಲಕರಾದ ಶ್ರೀ ಮುರಳಿಕೃಷ್ಣ ಕೆ ಎನ್ ಹಾಗೂ ಪ್ರಾಂಶುಪಾಲರಾದ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಹಾಗೂ ಅಭಾವಿಪ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖರಾದ ಯಶ್ವಿನಿ ಉಜಿರೆ ,ಅಭಾವಿಪ ಪುತ್ತೂರು ನಗರ ಉಪಾಧ್ಯಕ್ಷೆ ಹಾಗೂ ಅಭಾವಿಪ ಕರ್ನಾಟಕ ದಕ್ಷಿಣ ಪ್ರಾಂತದ ಕಲಾಮಂಚ್ ಪ್ರಮುಖರಾದ ಕು ದೀಪಿಕಾ ಎಸ್ , ಅಭಾವಿಪ ಕರ್ನಾಟಕ ದಕ್ಷಿಣ ಪ್ರಾಂತದ ವಿದ್ಯಾರ್ಥಿನಿ ಪ್ರಮುಖರಾದ ಕು ಅಮೃತಾಂಬ , ಸಮನ್ವಿತ್ ಕೆ , ಕಾಲೇಜಿನ ಉಪನ್ಯಾಸಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದರು , ಕು ಭೂಮಿಕಾ ಪ್ರಾರ್ಥಿಸಿದರು , ಕು ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿ ಶಕ್ತಿ-ರಾಷ್ಟ್ರ ಶಕ್ತಿ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು