ಉಡುಪಿ ಪೇಜಾವರ ಮಠದ ನೀಲಾವರ ಗೋಶಾಲೆಯ ಹೆಸರಲ್ಲಿ ಅನಧಿಕೃತ ದೇಣಿಗೆ ಸಂಗ್ರಹ : ನೀಲಾವರ ಗೋವರ್ಧನಗಿರಿ ಟ್ರಸ್ಟ್ನ ಸದಸ್ಯ ವಜಾ -ಕಹಳೆ ನ್ಯೂಸ್

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ ಬೆನ್ನಲ್ಲೇ ಅಂತಹದೆ ಮತ್ತೊಂದು ಘಟನೆ ಉಡುಪಿ ಜಿಲ್ಲೆಯ ಪೇಜಾವರ ಮಠದಲ್ಲಿ ನಡೆದಿದೆ.
ಉಡುಪಿ ಪೇಜಾವರ ಮಠದ ಅಧಿನದಲ್ಲಿರುವ ನೀಲಾವರ ಗೋಶಾಲೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಅನಧಿಕೃತ ದೇಣಿಗೆ ಹಣ ಸಂಗ್ರಹಿಸುತ್ತಿದ್ದ ಗೋವರ್ಧನಗಿರಿ ಟ್ರಸ್ಟ್ನ ಸದಸ್ಯನೊಬ್ಬನ ವಂಚನೆ ಬಯಲಿಗೆ ಬಂದಿದೆ. ಈ ಹಿನ್ನೆಲೆ ತಕ್ಷಣ ಆರೋಪಿಯಾದ ಶಶಿಧರ್ ಭಟ್ ಎನ್ನುವವನ್ನು ಟ್ರಸ್ಟ್ನಿಂದ ವಜಾಗೊಳಿಸಲಾಗಿದೆ.
ಉಡುಪಿ ಭಾರತೀಶ ಜ್ವವೆಲ್ಲರ್ಸನ ಮಾಲೀಕ ಶಶಿಧರ್ ಭಟ್ ಎಂಬಾತ ನೀಲಾವರ ಗೋಗ್ರಾಸ ಸೇವಾತಂಡೆ ಎಂಬ ಅಧಿಕೃತ ಸಂಘಟನೆಯನ್ನು ರಚಿಸಿಕೊಂಡು, ಪೇಜಾವರ ಸ್ವಾಮೀಜಿಯವರ ಭಾವ ಚಿತ್ರವನ್ನು ಮತ್ತು ಮಠದ ಹೆಸರನ್ನು ಮನವಿ ಪತ್ರದಲ್ಲಿ ಬಳಸಿದ್ದನು. ಆದರೆ ಇದನ್ನು ಶ್ರೀಗಳ ಗಮನಕ್ಕೆ ತರದೆ ಸಾರ್ವಜನಿಕರಿಂದ ಬಾರಿ ಪ್ರಮಾಣದ ದೇಣಿಗೆ ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ ಗೋವರ್ಧನಗಿರಿ ಟ್ರಸ್ಟ್ನ ವಿಶ್ವಸ್ಥ ಲಕ್ಷ್ಮೀ ನಾರಾಯಣ ರಾವ್, ‘’ಶಶಿಧರ್ ನಡೆಸಿರುವ ಈ ಚಟುವಟಿಕೆಗೆ ಪೇಜಾವರ ಮಠಕ್ಕೆ ಅಥವ ನೀಲಾವರ ಗೋಶಾಲೆಗೆ ಸಂಬಂಧವಿಲ್ಲ. ಆತನ ತಂಡ ಸಂಪೂರ್ಣ ಅನಧಿಕೃತವಾಗಿದ್ದು, ಆತನನ್ನು ಟ್ರಸ್ಟ್ನಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ಗೋಭಕ್ತರು ಇಂತವರ ಮಾತುಗಳಿಗೆ ಮೋಸ ಹೋಗಬೇಡಿ. ದಾನ ನೀಡುವುದಾದರೆ ಟ್ರಸ್ಟ್ನ ಅಧಿಕೃತ ರಸಿದಿಯನ್ನು ಪಡೆದ ನಂತರವೇ ಹಣ ನೀಡಿ ಎಂದು ಮನವಿ ಮಾಡಿದ್ದಾರೆ.









