Recent Posts

Monday, July 6, 2026
ಬೆಂಗಳೂರುರಾಜ್ಯಸುದ್ದಿ

ಆರ್ಥಿಕ ಸಂಕಷ್ಟದಲ್ಲಿದ್ದ ವೈಶಾಕ್ : ಸ್ನೇಹಿತನಿಗೆ ಆಗಾಗ ಹಣ ನೀಡ್ತಿದ್ದ ನಟಿ ಕೃಷಿ ತಾಪಂಡ -ಕಹಳೆ ನ್ಯೂಸ್

ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಉದ್ಯಮಿ, ಸ್ನೇಹಿತ ವೈಶಾಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿ ವೈಶಾಕ್ ಆರ್ಥಿಕ ಸಂಕಷ್ಟದಲ್ಲಿದ್ದು, ಆಗಾಗ ತಾನೇ ಹಣ ನೀಡುತ್ತಿದ್ದೆ ಎಂದು ನಟಿ ಪೊಲೀಸರ ಎದುರು ಹೇಳಿಕೆ ದಾಖಲಿಸಿದ್ದಾರೆ.
ತನಿಖೆ ವೇಳೆ ವೈಶಾಕ್ ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು. ಇದೇ ಕಾರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪೊಲೀಸ್ ವಿಚಾರಣೆ ವೇಳೆ ನಟಿ ಕೃಷಿ ತಾಪಂಡ, ಸ್ನೇಹಿತನಿಗೆ ಆಗಾಗ ಆರ್ಥಿಕ ಸಹಾಯ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ. 40 ರಿಂದ 50 ಸಾವಿರ ರೂ.ವರೆಗೆ ಹಲವು ಬಾರಿ ಹಣ ವರ್ಗಾವಣೆ ಮಾಡಿದ್ದ ದಾಖಲೆಗಳನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.