Recent Posts

Monday, July 6, 2026
ಉಡುಪಿಜಿಲ್ಲೆಸುದ್ದಿ

ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಡಾ. ಎಚ್.ಅಶೋಕ್ ಗೆ ಸನ್ಮಾನ -ಕಹಳೆ ನ್ಯೂಸ್

ಕೋಟ : ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಡಾ. ಎಚ್. ಅಶೋಕ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರು, ವೈದ್ಯಕೀಯ ಸೇವೆ ಎನ್ನುವುದು ಕೇವಲ ವೃತ್ತಿಯಲ್ಲ, ಮಾನವೀಯತೆಯ ಶ್ರೇಷ್ಠ ಸೇವೆಯಾಗಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಾ. ಅಶೋಕ್ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಆಡಳಿತಾತ್ಮಕ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಸನ್ಮಾನದ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಶಿವರಾಜ್, ಕ್ಲಬ್ ಅಡ್ವೈಸರ್ ಚಂದ್ರಶೇಖರ ಮೆಂಡನ್, ವಲಯ ಸೇನಾನಿ ದಯಾನಂದ ಆಚಾರ್ ಹಾಗೂ ಸದಸ್ಯರಾದ ಉದಯ್ ಹೆಗ್ಡೆ, ಸುರೇಶ್ ಆಚಾರ್ ಮತ್ತು ಪ್ರಕಾಶ್ ಹಂದಟ್ಟು ಉಪಸ್ಥಿತರಿದ್ದರು.