Recent Posts

Monday, July 6, 2026
ಉಡುಪಿಜಿಲ್ಲೆಸುದ್ದಿ

ಪರೀಕದಲ್ಲಿ ‘ಬಲೇ ಕೆಸರ್’ಡ್ಡ್ ಗೊಬ್ಬುಗ’ ಸಂಭ್ರಮ: ಹುಲಿಕುಣಿತಕ್ಕೆ ಹೆಜ್ಜೆ ಹಾಕಿದ ಡಿಸಿ ಸ್ವರೂಪ ಟಿ.ಕೆ. -ಕಹಳೆ ನ್ಯೂಸ್

ಉಡುಪಿ: ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ, ಪರೀಕ ಆಶ್ರಯದಲ್ಲಿ ‘ಬಲೇ ಕೆಸರ್’ಡ್ಡ್ ಗೊಬ್ಬುಗ’ (ಬನ್ನಿ ಕೆಸರಿನಲ್ಲಿ ಆಡುವ) ವಿನೂತನ ಗ್ರಾಮೀಣ ಕ್ರೀಡಾಕೂಟವನ್ನು ಪರೀಕ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ಭಾನುವಾರ ಆಯೋಜಿಸಲಾಯಿತು.

ಗ್ರಾಮದ ನೂರಾರು ಮಂದಿ ಕೆಸರಿನ ಮೈದಾನದಲ್ಲಿ ನಡೆದ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗಾಗಿ ‘ನಿಧಿ ಶೋಧನೆ’ ಎಂಬ ವಿನೂತನ ಸ್ಪರ್ಧೆಯೂ ಗಮನ ಸೆಳೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹುಲಿಕುಣಿತಕ್ಕೆ ಹೆಜ್ಜೆ ಹಾಕಿದ ಡಿಸಿ:

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡರು. ಈ ವೇಳೆ‌ ಅವರು ಹುಲಿಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಗ್ರಾಮಸ್ಥರು ಹೆಜ್ಜೆಹಾಕಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಸಾಮಾನ್ಯವಾಗಿ ಜಿಲ್ಲಾಧಿಕಾರಿಯನ್ನು ದೂರದಿಂದಲೇ ನೋಡುತ್ತಿದ್ದ ಗ್ರಾಮಸ್ಥರು, ಈ ಬಾರಿ ಅವರೊಂದಿಗೆ ಹುಲಿಕುಣಿತದಲ್ಲಿ ಭಾಗಿಯಾಗಿ ಕುಣಿದು ಸಂಭ್ರಮಿಸಿದರು. ಜನರೊಂದಿಗೆ ಬೆರೆತು ಕ್ರೀಡಾಕೂಟದ ಉತ್ಸಾಹವನ್ನು ಹಂಚಿಕೊಂಡ ಜಿಲ್ಲಾಧಿಕಾರಿಯ ನಡೆ ಎಲ್ಲರ ಗಮನ ಸೆಳೆಯಿತು.