
ಪುತ್ತೂರು: ಕಂಬಳಕ್ಕೆ ಸರಕಾರ ನೀಡುವುದಾಗಿ ಹೇಳಿದ್ದ ಅನುದಾನವನ್ನು ಬಿಡುಗಡೆ ಮಾಡುವಂತೆ ಪ್ರವಾಸೋಧ್ಯಮ ಸಚಿವ ಕೆ ಜೆ ಜಾರ್ಜ್ ಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು.
ಗುರುವಾರ ಸಚಿವರನ್ನು ಭೇಟಿಯಾಗಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ದ ಕ ಜಿಲ್ಲೆಯ ಒಟ್ಟು 24 ಕಂಬಳಗಳಿಗೆ ಸರಕಾರ ತಲಾ 5 ಲಕ್ಷ ಅನುದಾನವನ್ನು ಘೋಷಣೆ ಮಾಡಿದೆ. ಈ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.










