Recent Posts

Thursday, July 2, 2026
ದೆಹಲಿಸುದ್ದಿ

ಅಮರನಾಥ ಯಾತ್ರೆ ಆರಂಭ : ಬಿಗಿ ಭದ್ರತೆಯಲ್ಲಿ ಜಮ್ಮುವಿನಿಂದ ಹೊರಟ ಮೊದಲ ತಂಡ -ಕಹಳೆ ನ್ಯೂಸ್

ಶ್ರೀನಗರ: ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಅಮರನಾಥ ಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಬಹುಸ್ತರದ ಭದ್ರತಾ ವ್ಯವಸ್ಥೆಯ ನಡುವೆ ಭಕ್ತರ ಮೊದಲ ತಂಡವು ಜಮ್ಮುವಿನಿಂದ   ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (LG) ಮನೋಜ್ ಸಿನ್ಹಾ   ಅವರು ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಲ್ಲಿ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿದರು.