Friday, July 3, 2026
ಸುದ್ದಿ

ಅರಬ್ಬಿ ಸಮುದ್ರದ ನೀರಿನಲ್ಲೇ ಲ್ಯಾಂಡಿಂಗ್ ಆದ ಅಮೆರಿಕದ ಮಿಲಿಟರ್ ಹೆಲಿಕಾಪ್ಟರ್!; ಮೂವರ ರಕ್ಷಣೆ, ಓರ್ವ ನಾಪತ್ತೆ -ಕಹಳೆ ನ್ಯೂಸ್

ಮನಾಮ : ಮಧ್ಯಪ್ರಾಚ್ಯದಲ್ಲಿ ಇರಾನ್ ಜೊತೆಗಿನ ಉದ್ವಿಗ್ನತೆಯ ಮಧ್ಯೆಯೇ ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಗೆ (US Navy) ಸೇರಿದ ಯುದ್ಧ ಹೆಲಿಕಾಪ್ಟರ್ ಒಂದು ತುರ್ತು ಪರಿಸ್ಥಿತಿಯಿಂದಾಗಿ ಸಮುದ್ರದ ನೀರಿನ ಮೇಲೆಯೇ ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಅಮೆರಿಕದನೌಕಾಪಡೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮುಂಜಾನೆ 3.30 ರ ಸುಮಾರಿಗೆ ಸಂಭವಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ‘MH-60S ಸೀ ಹಾಕ್’ (Sea Hawk) ಎಂದು ಗುರುತಿಸಲಾಗಿದೆ. ಇದು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ದೈತ್ಯ ವಿಮಾನವಾಹಕ ಯುದ್ಧ ನೌಕೆ ‘ಯುಎಸ್ಎಸ್ ಜಾರ್ಜ್ ಎಚ್​​ಚ್‌ಡಬ್ಲ್ಯೂ ಬುಷ್’ ಗೆ ಸೇರಿದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೀರಿನ ಮೇಲೆ ತುರ್ತು ಭೂಸ್ಪರ್ಶ ಮಾಡಿದ ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಸಿಬ್ಬಂದಿಗಳನ್ನು ರಕ್ಷಿಸಿ ಯುದ್ಧ ನೌಕೆಗೆ ಕರೆತರಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ನಾಲ್ಕನೇ ಸಿಬ್ಬಂದಿಯ ಪತ್ತೆಗಾಗಿ ಅಮೆರಿಕ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ಸಮುದ್ರದಾದ್ಯಂತ ತೀವ್ರ ಹುಡುಕಾಟ ನಡೆಸುತ್ತಿವೆ.