ಹಾರ್ಮುಜ್‌ನಲ್ಲಿ ಭೀಕರ ದಾಳಿಯಿಂದ ಬಚಾವ್ ಆಗಿ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ ತೈಲ ಟ್ಯಾಂಕರ್-ಕಹಳೆ ನ್ಯೂಸ್

ನವದೆಹಲಿ: ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟು ಇರಾಕಿ ಕಚ್ಚಾ ತೈಲ ಹೊತ್ತು ಸಾಗಿದ್ದ ತೈಲ ಟ್ಯಾಂಕರ್, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿಯಿಂದ ಬಚಾವ್ ಆಗಿ ಭಾರತಕ್ಕೆ ಸುರಕ್ಷಿತವಾಗಿ ತಲುಪಿದೆ.
ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಬರುವಾಗ ತೈಲ ಟ್ಯಾಂಕರ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ದಾಳಿಯಿಂದ ಪಾರಾಗಿ ಈಗ ಒಡಿಶಾದ ಪ್ಯಾರದೀಪ್ ಬಂದರಿಗೆ ಸುರಕ್ಷಿತವಾಗಿ ಬಂದಿದೆ.
ಎಂಟಿ ಸನ್ಮಾರ್ ಹೆರಾಲ್ಡ್ ಎಂಬ ಹಡಗು ಇರಾಕ್‌ನಿಂದ ಬಸ್ರಾ ಮೀಡಿಯಂ ಮತ್ತು ಬಸ್ರಾ ಹೆವಿ ಕಚ್ಚಾ ತೈಲದ ಸರಕುಗಳನ್ನು ಸಾಗಿಸುತ್ತಿತ್ತು. ಟ್ಯಾಂಕರ್ ಹಾರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿಗೆ ಒಳಗಾಗಿತ್ತು. ತೈಲ ಟ್ಯಾಂಕರ್‌ಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.
ಹಡಗು ಮತ್ತು ಅದರ ಸಿಬ್ಬಂದಿಯ ಸುರಕ್ಷತೆಗಾಗಿ ಘಟನೆಯ ನಂತರ ಹಡಗು ತನ್ನ ಮಾರ್ಗವನ್ನು ಬದಲಾಯಿಸಿತು. ಯಾವುದೇ ಭದ್ರತಾ ಉಲ್ಲಂಘನೆಯಿಲ್ಲದೆ ಭಾರತೀಯ ಕರಾವಳಿಯ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು ಎಂದು ವರದಿಯಾಗಿದೆ.
ಒಡಿಶಾ ಕರಾವಳಿಯಿಂದ ಹೊರಬಂದ ನಂತರ, ಟ್ಯಾಂಕರ್ ಪ್ಯಾರಾದೀಪ್ ಬಳಿ ಸುಮಾರು 22 ಕಿಲೋಮೀಟರ್ ಕಡಲಾಚೆಯ ದೂರದಲ್ಲಿ ಲಂಗರು ಹಾಕಿತು.










