
ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಇದೇ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆಮಿರ್-ಗೌರಿ ಮದುವೆಯ ಆಹಾರ ಮೆನುವನ್ನು ಅವರಿಬ್ಬರ ಮಕ್ಕಳೇ ಖುದ್ದಾಗಿ ಯೋಜಿಸಿರುವುದು ವಿಶೇಷವಾಗಿದೆ.
ಈ ವಿಚಾರ ಈಗ ಸಿನಿ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಜುಲೈ 5ರಂದು ಮುಂಬೈನಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಸರಳವಾಗಿ ವಿವಾಹ ನೋಂದಣಿ ನಡೆಯಲಿದ್ದು, ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ
ಈ ಮದುವೆಗೆ ಅಗತ್ಯವಿರುವ ಸಂಪೂರ್ಣ ಆಹಾರ ಮೆನುವನ್ನ ಆಮಿರ್ ಮತ್ತು ಗೌರಿ ಅವರ ಮಕ್ಕಳೇ ಪ್ಲ್ಯಾನ್ ಮಾಡಿದ್ದಾರೆ. ಸಮಾರಂಭದ ಎಲ್ಲಾ ಆಹಾರ ವ್ಯವಸ್ಥೆಯನ್ನು ಮಕ್ಕಳು ಆಯ್ಕೆ ಮಾಡಿದ್ದು, ಮದುವೆಯ ಇತರೆ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ.










