ಗುಟ್ಕಾ ಉಗಿಯಲು ಬಗ್ಗಿದ ಯುವಕನ ತಲೆಗೆ ಗುದ್ದಿದ ಟಿಪ್ಪರ್ : ರಸ್ತೆಗೆ ಬಿದ್ದ ರುಂಡ, ಬಸ್ಸಿನಲ್ಲಿ ನೇತಾಡಿದ ಮುಂಡ..!-ಕಹಳೆ ನ್ಯೂಸ್

ಧಾರವಾಡ : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಿಟಕಿಯಿಂದ ದೇಹದ ಭಾಗಗಳನ್ನು ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೀಕರ ಅಪಘಾತವೇ ಸಾಕ್ಷಿಯಾಗಿದೆ. ಚಲಿಸುವ ಬಸ್‌ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದ ವಿದ್ಯಾರ್ಥಿಯೊಬ್ಬ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ತಲೆಯ ರುಂಡವೇ ಕಟ್ ಆಗಿ ಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.










