ರೋಟರಿ ಕ್ಲಬ್ ಕೋಟೇಶ್ವದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಪತ್ರಕರ್ತೆ,ನಿರೂಪಕಿ ಅಕ್ಷತಾ ಗಿರೀಶ್ ಹಾಗೂ ಕಾರ್ಯದರ್ಶಿಯಾಗಿ ಅರುಣ್ ದೇವಾಡಿಗ ಆಯ್ಕೆ -ಕಹಳೆ ನ್ಯೂಸ್

ರೋಟರಿ ಕ್ಲಬ್ ಕೋಟೇಶ್ವರ ಇದರ ನೂತನ ಅಧ್ಯಕ್ಷರಾಗಿ ಪತ್ರಕರ್ತೆ,ನಿರೂಪಕಿ ಅಕ್ಷತಾ ಗಿರೀಶ್ ಹಾಗೂ ಕಾರ್ಯದರ್ಶಿಯಾಗಿ ಅರುಣ್ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಅವರು, ಉಡುಪಿ ಟೈಮ್ಸ್ ಇದರ ವರದಿಗರರಾಗಿ, ಕಾರ್ಯಕ್ರಮ ನಿರೂಪಕಿಯಾಗಿ, ಟಿವಿ ನಿರೂಪಕಿಯಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜೆಸಿಐ ಕುಂದಾಪುರ ಇದರ ಪೂರ್ವ ಅಧ್ಯಕ್ಷರಾಗಿ ಆಯ್ಕೆಯಾದವರು, ಜೆಸಿಐ ವಲಯ ಇದರ ಉಪಾಧ್ಯಕ್ಷರಾಗಿ ಅನ್ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿ ಅರುಣ ದೇವಾಡಿಗ ಯುವ ಉದ್ಯಮಿಯಾಗಿ ಯಶಸ್ವಿ ಶಾಮಿಯಾನದ ಮಾಲೀಕರು ಹಾಗೂ ರೋಟರಿಯಕ್ಟ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.










