Friday, July 3, 2026
ಸುದ್ದಿ

ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಘೋರ ದುರಂತ : ಬಂಡೆ ಕುಸಿದು 7 ಕಾರ್ಮಿಕರು ಸಾವು

ರಾಮನಗರ: ಕಲ್ಲು ಕ್ವಾರಿಯಲ್ಲಿ  ಬಂಡೆ ಕುಸಿದು 7 ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ  ಬಳಿ ನಡೆದಿದೆ.

ಕಾವೇರಿ ಕಂಪನಿಗೆ ಸೇರಿದ ಬಂಡೆಯಲ್ಲಿ ಇಂದು ಬೆಳಗ್ಗೆ ಕಾರ್ಮಿಕರು ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದೆ. ಮೇಲೆ ಇಟಾಚಿಯಲ್ಲಿ ಕೆಲಸ ಮಾಡುತ್ತಿತ್ತು. ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಬಿದ್ದಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

100 ಅಡಿಯ ಮೇಲೆ ಹಿಟಾಚಿಯಿಂದ ಕ್ಲೀನ್ ಮಾಡಲಾಗುತ್ತಿತ್ತು. ಹೊಸ ಕ್ರಷರ್ ನಡೆಸಲು ಹಿಟಾಚಿ ಡ್ರೈವರ್‌ ಸ್ಥಳ ಕ್ಲೀನ್ ಮಾಡುತ್ತಿದ್ದ. ಈ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದನ್ನ ಗಮನಿಸದ ಹಿಟಾಚಿ ಡ್ರೈವರ್‌ನಿಂದ ಅವಘಡ ಆಗಿದೆ ಎನ್ನಲಾಗಿದೆ.

ಎರಡು-ಮೂರು ಕಲ್ಲು ಬಂಡೆಗಳನ್ನ ಹಿಟಾಚಿ ಡ್ರೈವರ್‌ ಕೆಳಗೆ ತಳ್ಳಿದ್ದಾನೆ. ಕೆಳಗೆ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕರ ತಲೆಯ ಮೇಲೆ ಬಂಡೆ ಬಿದ್ದಿದೆ. ಪರಿಣಾಮ 7 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕಾರ್ಮಿಕರು ಬಿಹಾರದವರು ಎನ್ನಲಾಗಿದೆ.