Friday, July 3, 2026
ಸುದ್ದಿ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ, ಭಾರತ ಸರ್ಕಾರ ವತಿಯಿಂದ  ಬೀಡಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – ಕಹಳೆ ನ್ಯೂಸ್

ಪುತ್ತೂರು : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ, ಭಾರತ ಸರ್ಕಾರ ವತಿಯಿಂದ 2026-27ನೇ ಸಾಲಿನ ಬೀಡಿ, ಸಿನಿ, ಮೈನ್ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ತಾಲೂಕಿನ ಎಲ್ಲಾ ಅರ್ಹ ಬೀಡಿ ಕಾರ್ಮಿಕರ 1 ನೇ ತರಗತಿಯಿಂದ 12ನೇ ತರಗತಿ, ಡಿಗ್ರಿ, ಐಟಿಐ, ಪಾಲಿಟೆಕ್ನಿಕ್, ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಕೋರ್ಸ್ಗೆ ಅನುಗುಣವಾಗಿ ವಾರ್ಷಿಕ 1,000 ದಿಂದ 25,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವಿದೆ. ಆನ್ ಲೈನ್ ಮೂಲಕ ಅರ್ಜಿಯನ್ನು www.schoolorship.gov.in ವೆಬ್ ಸೈಟ್ ನಲ್ಲಿ ಸಲ್ಲಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರೀ ಮೆಟ್ರಿಕ್ ಗೆ 31 ಆಗಸ್ಟ್ 2026 ಮತ್ತು ಪೋಸ್ಟ್ ಮೆಟ್ರಿಕ್ ಗೆ 31 ಅಕ್ಟೋಬರ್ 2026 ಹೆಚ್ಚಿನ ಮಾಹಿತಿಗಾಗಿ ಬೀಡಿ ಕಾರ್ಮಿಕರ ಡಿಸ್ಪನ್ಸರಿ ಪುತ್ತೂರು ಇವರನ್ನು ಸಂಪರ್ಕಿಸಿ