Sunday, June 28, 2026
ಜಿಲ್ಲೆಮೈಸೂರುಸುದ್ದಿ

ಬಿಲ್‌ ವಿಚಾರಕ್ಕೆ ಗಲಾಟೆ ತೆಗೆದು ಪಬ್‌ ಮ್ಯಾನೇಜರ್‌ ಮೇಲೆ ಹಲ್ಲೆ – ಕಹಳೆ ನ್ಯೂಸ್

ಮೈಸೂರು: ಬಿಲ್‌ ವಿಚಾರಕ್ಕೆ ಜಗಳ ತೆಗೆದು ಪಬ್‌ ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಾಹೀರಾತು

ಮೈಸೂರಿನ ಅಗ್ರಹಾರದಲ್ಲಿನ ಸಿಪಾಯಿ ಗ್ರಾಂಡೆ‌ ಪಬ್‌ನಲ್ಲಿ ಈ ಗಲಾಟೆಯಾಗಿದೆ‌. ಗಲಾಟೆ ದೃಶ್ಯಾವಳಿ‌ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬರ್ತ್‌ಡೇ ಪಾರ್ಟಿಗೆ ಪಬ್‌ಗೆ ಬಂದವರು ಬಿಲ್ ವಿಚಾರದಲ್ಲಿ ಮ್ಯಾನೇಜರ್ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಜರಾಬಾದ್‌ನ ಯುವಕರ ಟೀಂನಿಂದ ಈ ಹಲ್ಲೆ ನಡೆದಿದೆ. 7 ಮಂದಿ ಯುವಕರಿದ್ದ ಪಾರ್ಟಿಯಲ್ಲಿ 15 ಸಾವಿರ ಬಿಲ್ ಆಗಿತ್ತು. ಬಿಲ್ ಕೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿದ್ದಾರೆ.

ಕಾರ್ಡ್ ಮೂಲಕ ಪೇ ಮಾಡ್ತೀವಿ ಎಂದು ಹೊರಗೆ ಕರೆಸಿಕೊಂಡು ಪಬ್ ಮ್ಯಾನೇಜರ್ ವಿನಯ್ ಮೇಲೆ ಹಲ್ಲೆ ಮಾಡಿ ವಿನಯ್ ಕುತ್ತಿಗೆಯಲ್ಲಿದ್ದ 23 ಗ್ರಾಂ ತೂಕದ ಚಿನ್ನದ ಸರ ಕಿತ್ತು ಕೊಂಡಿದ್ದಾರೆ. ಘಟನೆ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.