ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಯಕ್ಷದ್ರುವ ಪಟ್ಲ ಪೌಂಡೇಶನ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಯಕ್ಷ ಶಿಕ್ಷಣತರಬೇತಿ ಉದ್ಘಾಟನೆ -ಕಹಳೆ ನ್ಯೂಸ್

ಪಟ್ಟೆ ಬಡಗನ್ನೂರು: ತಾನು ಪಡೆದ ಖ್ಯಾತಿಯನ್ನು ಇತರೆ ಕಲಾವಿದರಿಗೆ ಧಾರೆಯುವುದು ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.)ಟ್ರಸ್ಟ್ ನ ಮುಖ್ಯ ಉದ್ದೇಶ ನಮ್ಮ ಮಣ್ಣಿನ ಕಲೆಯ ಮೂಲಕ ಸಂಸ್ಕೃತಿಯನ್ನು, ಕಲಿಕೆಯಲ್ಲಿ ಏಕಾಗ್ರತೆಯನ್ನು ಆತ್ಮಸ್ಥೈರ್ಯವನ್ನು ಮೂಡುವುದು.ಮನಸ್ಸಿಗೆ ನೆಮ್ಮದಿ ಕೊಡುವ ಕಲೆ ಅದೇ ಯಕ್ಷಗಾನದ ಕಲೆ ಎಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.)ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಶಿಕ್ಷಣ ತರಬೇತಿಯನ್ನು ಉದ್ಘಾಟನೆ ಮಾಡಿ ಶ್ರೀ ವಾಸುದೇವ ಐತಾಳ ಪಣಂಬೂರು ಪ್ರಧಾನ ಸಂಚಾಲಕರು,ಯಕ್ಷದ್ರುವ ಯಕ್ಷ ಶಿಕ್ಷಣ ಸಮಿತಿ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ಗಣರಾಜ ಕುಂಬ್ಳೆ ಅವರು ಯಕ್ಷಗಾನಕಲೆ ಅತ್ಯಂತ ಪ್ರಿಯವಾದ ಕಲೆ. ಪುರಾಣದ ಪರಿಚಯ ಮಾಡಿಕೊಡುತ್ತದೆ,ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನದ ಕಲೆಯನ್ನು ಪರಿಚಯಿಸುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯವನ್ನು ಉಂಟು ಮಾಡುವುದು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕಲೆಯು ಸರ್ವಾಂಗಿಣ ಬೆಳವಣಿಗೆಗೆ ಕಾರಣವಾಗಿದೆ. ಶಿಕ್ಷಣ ಕೇವಲ ಪಠ್ಯದಲ್ಲಿರುವ ವಿಷಯ ಮಾತ್ರವಲ್ಲದೆ ಯಕ್ಷಗಾನದ ಕಲೆಯನ್ನು ಮಕ್ಕಳಿಗೆ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶ್ರದ್ಧೆಯಿಂದ ಕಲಿತಾಗ ಸಂಸ್ಕಾರ, ಶಿಸ್ತು ತಾನಾಗಿಯೆ ಬರುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಯಕ್ಷದ್ರುವ ಯಕ್ಷ ಶಿಕ್ಷಣ ಸಮಿತಿ ಪುತ್ತೂರು ಸುಳ್ಯ ಇದರ ಸಂಚಾಲರಾದ ಶ್ರೀಮಾನ್ ಪ್ರಶಾಂತ್ ರೈ ಮುಂಡಾಲ ಗುತ್ತು ನಾಟ್ಯಗುರುಗಳಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾವತಿ ಮಾತಾಜಿ ಸಾಗರ್ತಿಸಿ, ಶ್ರೀಮತಿ ಲತಾ ಮಾತಾಜಿಯವರು ವಂದನಾರ್ಪಣೆಗೈದರು. ಶ್ರೀಮತಿ ಸ್ವರ್ಣಶ್ರೀ ಮಾತಾಜಿ ಅವರು ಕಾರ್ಯಕ್ರಮ ನಿರೂ ಪಿಸಿದರು.










