Thursday, June 25, 2026
ಸುದ್ದಿ

ಜಿನೆವಾದಲ್ಲಿ ಅಮೆರಿಕ-ಇರಾನ್‌ ಶಾಂತಿ ಮಾತುಕತೆ ವೇಳೆ ಮುನೀರ್‌ ಹತ್ಯೆಗೆ ಇಸ್ರೇಲ್‌ ಸಂಚು!-ಕಹಳೆ ನ್ಯೂಸ್

ದುಬೈ: ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಅಮೆರಿಕ ಮತ್ತು ಇರಾನ್‌  ನಡುವಿನ ಉನ್ನತ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನದ  ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹತ್ಯೆಗೆ ಇಸ್ರೇಲ್‌ ಸಂಚು ರೂಪಿಸಿತ್ತು ಎಂಬ ಸ್ಫೋಟಕ ವಿಚಾರ ಈಗ ಭಾರೀ ಚರ್ಚೆಯಾಗುತ್ತಿದೆ.

ಜಾಹೀರಾತು

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿತ್ತು. ಈ ನಿಯೋಗದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾತುಕತೆಯ ಸಮಯದಲ್ಲಿ ಅಸಿಮ್ ಮುನೀರ್ ಮತ್ತು ಇಡೀ ಪಾಕಿಸ್ತಾನಿ  ನಿಯೋಗವನ್ನು ಹತ್ಯೆ ಮಾಡಲು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್ (Mossad) ಸಂಚು ರೂಪಿಸಿತ್ತು ಎಂದು ಬ್ರೆಜಿಲ್ ಪತ್ರಕರ್ತ ಪೆಪೆ ಎಸ್ಕೋಬಾರ್ ಆರೋಪಿಸಿದ್ದಾರೆ.

ಲೆಬನಾನ್-ಆಸ್ಟ್ರೇಲಿಯನ್ ಮೂಲದ ಉದ್ಯಮಿ, ಪಾಡ್‌ಕ್ಯಾಸ್ಟ್ ಹೋಸ್ಟ್ ಮತ್ತು ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸುದ್ದಿ ನಿರೂಪಕ, ರಾಜಕೀಯ ವಿಶ್ಲೇಷಕ ಮಾರಿಯೋ ನೌಫಲ್ ಅವರ ಪಾಡ್‌ಕಾಸ್ಟ್‌ನಲ್ಲಿ ಎಸ್ಕೋಬಾರ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.