Monday, September 7, 2026
ಜಿಲ್ಲೆಸುದ್ದಿ

ಮಂತ್ರಾಲಯ ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ : 21 ದಿನದಲ್ಲಿ 3.72 ಕೋಟಿ ರೂ. ಕಾಣಿಕೆ ಸಂಗ್ರಹ – ಕಹಳೆ ನ್ಯೂಸ್

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್ ತಿಂಗಳಿನ 21 ದಿನದ ಕಾಣಿಕೆ ಹುಂಡಿ ಎಣಿಕೆ  ಮುಕ್ತಾಯವಾಗಿದ್ದು, 21 ದಿನದಲ್ಲಿ 3.72 ರೂ. ಕಾಣಿಕೆ ಸಂಗ್ರಹವಾಗಿದೆ.
ಪ್ರತಿ ತಿಂಗಳಿನಂತೆ ಈ ಬಾರಿಯೂ ಭಕ್ತರು ದಂಡು ಮಠಕ್ಕೆ ಹರಿದು ಬಂದಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ 21 ದಿನಗಳಲ್ಲೇ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದೆ. ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,61,40,030 ರೂ. ಕರೆನ್ಸಿ ನೋಟುಗಳು. 11,02,500 ರೂ. ನಾಣ್ಯಗಳು ಸಂಗ್ರಹವಾಗಿವೆ. 67 ಗ್ರಾಂ ಚಿನ್ನ, 511 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.

ಜಾಹೀರಾತು

ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು