Thursday, June 25, 2026
ಸುದ್ದಿ

ಮೂವರ ಜೊತೆ ಅಫೇರ್; ತಪ್ಪೊಪ್ಪಿಕೊಂಡ ಬಿಲ್‌ಗೇಟ್ಸ್ – ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕಾ ಸಂಸತ್ತಿನ ಸಮಿತಿಯ ವಿಚಾರಣೆ ಸಂದರ್ಭದಲ್ಲಿ ಬಿಲ್‌ಗೇಟ್ಸ್ ತಮ್ಮ ವಿವಾಹೇತರ ಸಂಬಂಧಗಳ ಕುರಿತು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮಾಜಿ ಪತ್ನಿ ಮೆಲಿಂದಾ ಗೇಟ್ಸ್ ಜೊತೆಗಿನ ವೈವಾಹಿಕ ಜೀವನದಲ್ಲಿ ನಡೆದ 3 ಅಕ್ರಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಈ ಸಂಬಂಧಗಳ ಬಗ್ಗೆ ತಿಳಿದುಕೊಂಡಿದ್ದನು ಮತ್ತು ಬಿಲ್‌ಗೇಟ್ಸ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದನು ಎಂದು ವರದಿಯಾಗಿದೆ. ಗೇಟ್ಸ್ ಅವರು ಎಪ್‌ಸ್ಟೀನ್ ಅವರ ಈ ಬೆದರಿಕೆ ಬಗ್ಗೆ ಕ್ಲೋಸ್‌ಡೋರ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಜಾಹೀರಾತು