
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರ, ಯೋಜನೆಗಳ ಪರಿಷ್ಕರಣೆ ಮಾಡೋದು ಖಚಿತವಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ ಜೊತೆ ಅನ್ನಭಾಗ್ಯಕ್ಕೂ ಫಿಲ್ಟರ್ ಆಗಲಿದೆ.
ಆಹಾರ ಖಾತೆ ಸಚಿವ ಮುನಿಯಪ್ಪ ಸುಳಿವು ಕೊಟ್ಟಿದ್ದು, 13-14 ಲಕ್ಷ ಅನರ್ಹರನ್ನು ತೆಗೆಯೋ ಕೆಲಸ ಮಾಡ್ತೇವೆ ಅಂದಿದ್ದಾರೆ. ಸರ್ಕಾರಿ ನೌಕರಿ ಇರುವ ಕುಟುಂಬಕ್ಕೆ ಗ್ಯಾರಂಟಿ ಕಡಿತ ಮಾಡೋದಕ್ಕೆ ಚಿಂತನೆ ನಡೆಸಿದೆ.










