Monday, June 22, 2026
ಸುದ್ದಿ

ಲಕ್ನೋದಲ್ಲಿ ಧಗಧಗನೆ ಹೊತ್ತಿ ಉರಿದ ಕೋಚಿಂಗ್‌ ಸೆಂಟರ್‌ : ಪಾರಾಗಲು ಕಟ್ಟಡದ ಮೇಲಿಂದ ಜಿಗಿದ ವಿದ್ಯಾರ್ಥಿಗಳು-ಕಹಳೆ ನ್ಯೂಸ್

ಲಕ್ನೋ: ಅಲಿಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಕೋಚಿಂಗ್‌ ಸೆಂಟರ್‌ವೊಂದು  ಧಗಧಗನೆ ಹೊತ್ತಿ ಉರಿದಿದೆ. ಅವಘಡದಿಂದ ಪಾರಾಗಲು ವಿದ್ಯಾರ್ಥಿಗಳು ಕಟ್ಟಡದ ಮೇಲಿಂದ ಜಿಗಿದು ಕೆಳಗೆ ಬಿದ್ದಿರುವ ದೃಶ್ಯದ ವಿಡಿಯೋ ವೈರಲ್‌ ಆಗಿದ್ದು, ಮೈನಡುಗಿಸುವಂತಿದೆ.

ಜಾಹೀರಾತು
ಅಲಿಗಂಜ್‌ನ ಪೂರ್ಣಿಯಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿತು. ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಪೂರ್ತಿ ಆವರಿಸಿತ್ತು. ಬೆಂಕಿಯಿಂದ ಹೊಮ್ಮಿದ ಹೊಗೆ ಆಕಾಶದಲ್ಲಿ ಕಾರ್ಮೋಡ ಸೃಷ್ಟಿಸಿತು. ಹಲವಾರು ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಕಿ ಅವಘಡಕ್ಕೆ ತುತ್ತಾದ ಕಟ್ಟಡದ ನೆಲ ಮಹಡಿಯಲ್ಲಿ ಸಾಕುಪ್ರಾಣಿ ಅಂಗಡಿ ಇತ್ತು. ಮೇಲಿನ ಮಹಡಿಯಲ್ಲಿ ಗೇಮಿಂಗ್ ವಲಯವಿತ್ತು. ಅಲ್ಲಿ ಉದ್ಯೋಗಿಗಳು ಆಟಗಳಿಗೆ ಸಂಬಂಧಿಸಿದ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು