ದಾವಣಗೆರೆ: ಕ್ಯಾನ್ಸರ್‌ನಿಂದ ಬಳಲುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ (86) ಅವರು ಭಾರತೀಯ ಸೇನೆಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವೃದ್ದಾಶ್ರಮದಲ್ಲಿ ಕರಿಬಸಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರು ದೇಶದ ಯೋಧರಿಗಾಗಿ ಏನಾದರೂ ಒಂದೊಳ್ಳೆ ಕೆಲಸ ಮಾಡಬೇಕು ಎಂಬ ಸಂಕಲ್ಪ ಹೊಂದಿದ್ದರು. ಮನೆ ಮಾರಾಟ ಮಾಡಿದ ಹಣ, ಪಿಂಚಣಿಯ ಹಣ ಬ್ಯಾಂಕ್‌ನಲ್ಲಿ ಇರಿಸಿ, ಬರೋಬ್ಬರಿ ಹತ್ತು ಲಕ್ಷ ರೂಪಾಯಿಯನ್ನು ʻಭಾರತ್ ಕೀ ವೀರ್’ ನಿಧಿಗೆ ಅರ್ಪಿಸಿದ್ದಾರೆ. ಚೆಕ್‌ನ್ನು ಯೋಧರ ನಿಧಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿಎಂ ಅವರ ಕೈಗೆ ನೀಡಿದ್ದಾರೆ.