Friday, April 24, 2026
ಸುದ್ದಿ

ಅಡುಗೆ ಅನಿಲ ಅಭಾವ, ಅನ್ಯರಾಜ್ಯಗಳ ಚುನಾವಣೆ : ಮೀನುಗಾರಿಕೆ, ಕೈಗಾರಿಕೆಗೆ ಕಾರ್ಮಿಕರ ಕೊರತೆ- ಕಹಳೆ ನ್ಯೂಸ್

ಮಂಗಳೂರು : ಒಂದೆಡೆ ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ, ಅಸ್ಸಾಂನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ, ಇನ್ನೊಂದೆಡೆ ಅಡುಗೆ ಅನಿಲದ ಕೊರತೆಯಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆ ಅರ್ಧಕ್ಕರ್ಧ ನಿಂತು ಹೋಗಿದೆ.

ಮೇಲೆ ಹೇಳಲಾದ ರಾಜ್ಯಗಳಿಂದ ಮೀನುಗಾರಿಕೆ ವಲಯದಲ್ಲಿ ಹಲವು ಕಾರ್ಮಿಕರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದೋಣಿಗಳಲ್ಲಿ ತೆರಳುವುದಷ್ಟೇ ಅಲ್ಲದೆ ಅದರ ಪೂರಕ ವಿಭಾಗಗಳಾದ ಬಲೆ ನೇಯುವುದು, ದೋಣಿ ನಿರ್ಮಾಣ, ರಿಪೇರಿ ಘಟಕ, ಐಸ್ ಪ್ಲಾಂಟ್, ಮೀನು ಲೋಡಿಂಗ್ / ಅನ್‌ಲೋಡಿಂಗ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳ ಕಾರ್ಮಿಕರೇ ಇದ್ದಾರೆ. ದೋಣಿಯಲ್ಲಿ ತೆರಳುವಲ್ಲಿ ತಮಿಳುನಾಡು, ಕೇರಳದವರು ಹೆಚ್ಚಿದ್ದರೆ, ಉಳಿದ ಕಡೆ ಬಂಗಾಲ, ಅಸ್ಸಾಂ, ಜಾರ್ಖಂಡ್, ಒಡಿಶಾದವರು ಜಾಸ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೊರರಾಜ್ಯದ ಕಾರ್ಮಿಕರಿಗೆ ಇಲ್ಲಿ ಮುಖ್ಯವಾಗಿ ಕಾಡುತ್ತಿರುವುದು ವಾಣಿಜ್ಯ ಗ್ಯಾಸ್‌ ಸಮಸ್ಯೆ. ಪಸೀಲನ್, ಟ್ರಾಲ್ ಬೋಟ್‌ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುವಾಗ ಅಡುಗೆ ಮಾಡಲು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಕೊಂಡೊಯ್ಯುತ್ತಿದ್ದರು, ಕೆಲವು ದಿನಗಳಿಂದ ಸಿಲಿಂಡರ್‌ವ್ಯತ್ಯಯ ಉಂಟಾದ ಕಾರಣ ಸಮಸ್ಯೆಯಾಗಿದ್ದು, ಯಾರೂ ಮೀನುಗಾರಿಕೆಗೆ ಹೋಗಲು ಒಪ್ಪುತ್ತಿಲ್ಲ.

ಇನ್ನೊಂದು ವಿಚಾರವೆಂದರೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ. ಮುಖ್ಯವಾಗಿ ತಮಿಳು ನಾಡು, ಕೇರಳ, ಅಸ್ಸಾಂ, ಪ. ಬಂಗಾಲ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಹಾಕುವುದಕ್ಕೆಂದು ತಿಂಗಳ ಮುಂಚೆಯೇ ಕಾರ್ಮಿಕರು ತೆರಳಿರುವುದು. ಹಾಗಾಗಿ ದೋಣಿಗಳು ಶೇ. 50ರಷ್ಟು ದಡದಲ್ಲೇ ಬಾಕಿಯಾಗಿವೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 1,400ರಷ್ಟು ಟ್ರಾಲ್ ಬೋಟ್, 160ರಷ್ಟು ಪಸೀಲನ್ ಬೋಟ್‌ಗಳಿದ್ದು, ಅರ್ಧದಷ್ಟು ಮಾತ್ರವೇ ಮೀನುಗಾರಿಕೆಯಲ್ಲಿವೆ.

ನಗರದ ವಿವಿಧ ಕೈಗಾರಿಕ ಘಟಕಗಳು, ಹೊಟೇಲ್ ಕ್ಷೇತ್ರದಲ್ಲೂ ಹೊರರಾಜ್ಯದವರು ಇದ್ದಾರೆ. ಅವರಲ್ಲೂ ಅನಿಲ ಕೊರತೆಯಿಂದ ಊರಿಗೆ ಮರಳಿದವರಿದ್ದಾರೆ. ಇದರ ಜತೆಗೆ ಮತದಾನಕ್ಕಾಗಿಯೂ ಊರಿಗೆ ತೆರಳಿದ್ದಾರೆ. ಇದು ಕೈಗಾರಿಕ ಉತ್ಪಾದನೆಗೆ, ಹೊಟೇಲ್‌ಗಳ ಸುಗಮ ನಿರ್ವಹಣೆಗೆ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೋಲಿ, ರಮ್ಮಾನ್ ಆಚರಣೆಗೆಂದು ತಮ್ಮ ತಾಯ್ಕಾಡಿಗೆ ತೆರಳಿದವರಲ್ಲಿ ಅನೇಕರು ಇನ್ನೂ ಬಂದಿಲ್ಲ. ಮತದಾನ ಮಾಡಿದ ಬಳಿಕವೇ ಮರಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ