
ಮಂಗಳೂರು: ಮಂಗಳೂರು ಏರ್ ಪೋರ್ಟ್ ಖಾಸಗೀಕರಣಕ್ಕೆ ನಮ್ಮ ವಿರೋಧವಿದೆ. ಜನತೆಯನ್ನು ವಿಶ್ವಾಸ ಪಡೆದುಕೊಳ್ಳದೆ ಖಾಸಗೀಕರಣ ಮಾಡುವುದು ತಪ್ಪು ಎಂದು ವಸತಿ ಸಚಿವ ಯುಟಿ ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗೀಕರಣದ ಸಾಧಕ ಬಾಧಕದ ಬಗ್ಗೆ ಯಾರೂ ಮಾತಾಡ್ತಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಇದರ ಬಗ್ಗೆ ಮಾತಾಡಬೇಕು.
ಸಿಬ್ಬಂದಿಗಳ ಕೆಲಸದ ಭದ್ರತೆ ಬಗ್ಗೆ ಏನಿದೆ ಭರವಸೆ..? ಮುಂದೆ ಮಂಗಳೂರು ನಗರ, ಕೋರ್ಟನ್ನ ಖಾಸಗೀಕರಣ ಮಾಡುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ಮಂಗಳೂರು ಒಬ್ಬರ ಕೈಯಲ್ಲಿ ಇರಬಹುದು ಎಂದರು. ಇನ್ನು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಖಾಸಗೀಕರಣ ಮಾಡಲಾಗ್ತಿದೆ.
ಯಾರೊಬ್ಬನ ಕೈಗೆ ಕೊಟ್ಟು ಅಭಿವೃದ್ದಿ ಬೇಡ. ಬಾಯಲ್ಲಿ ಸ್ವದೇಶಿ ಮಂತ್ರ, ಕೆಲಸದಲ್ಲಿ ವಿದೇಶಿ ತಂತ್ರ. ಜಾಗೋ ಭಾರತ್ ಎಂದವರು ಈಗ ಎಲ್ಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಂಗಳೂರು ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂಪಾಯಿ ಇನಾಮು ನೀಡಲಾಗಿದೆ.
ಆರೋಪಿಗಳ ಪರವಾಗಿ ವಕೀಲರು ವಾದಿಸಬಾರದು. ಹಲ್ಲೆ ಮಾಡುವವರು ಹಲ್ಲೆ ಮಾಡುತ್ತಿರುತ್ತಾರೆ. ಗಲಾಟೆ ಮಾಡುವವರಿಂದಲೇ ಮತ್ತೆ ಮತ್ತೆ ಗಲಾಟೆ ಆಗ್ತಿದೆ. ಸಚಿವ ಅಂದಾಕ್ಷಣ ನಾನು ಏನೂ ಹೇಳಬಾರದೇ..? ಪೊಲೀಸ್ ಎಷ್ಟೇ ಇದ್ದರೂ ಕಾನೂನು ವಿರೋಧಿ ಕೃತ್ಯಗಳು ನಡೆಯುತ್ತಿದೆ.
ಗ್ಯಾಂಗ್ ರೇಪ್ ಕುರಿತು ಬಂಟ್ವಾಳ ಎಸ್ ಐ ದೂರು ದಾಖಲಿಸಬೇಕಿತ್ತು. ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ ಎಂದುವಸತಿ ಸಚಿವ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.









