
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಕಂಗನಾಗೆ ಸಾಥ್ ಕೊಟ್ಟರು.
ಬಳಿಕ ಮಾತನಾಡಿದ ಕಂಗನಾ.. ‘ಶ್ರೀರಾಮನಿದ್ದಲ್ಲಿ ನಾವಿದ್ದೇವೆ..ಈ ಜಗತ್ತಿನಲ್ಲಿ ಅವನಂತೆ ಯಾರೂ ಇಲ್ಲ..ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಪಟಾಕಿ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಂಟು ಟ್ರ್ಯಾಕ್ ಡಿಜಿಟಲ್ ಡಾಲ್ಬಿ ಸೌಂಡ್ ಸಿಸ್ಟಂ ಮೂಲಕ ಪಟಾಕಿ ಸದ್ದು ರಾಮ್ ಲೀಲಾ ಮೈದಾನದಾದ್ಯಂತ ಆವರಿಸಿತ್ತು.
ಈ ಸಂದರ್ಭದಲ್ಲಿ ಕಂಗನಾ ಅಭಿನಯದ ತೇಜಸ್ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಬಗ್ಗೆಯೂ ಮಾತನಾಡಿದ ನಟಿ ʻಶ್ರೀರಾಮನು ಕೆಡುಕಿನ ವಿರುದ್ಧ ಒಳಿತಿನ ವಿಜಯದ ಪತಾಕೆಯನ್ನು ಹಾರಿಸಿದಂತೆಯೇ ನಮ್ಮ ದೇಶದ ಸೈನಿಕರು ಕೂಡ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮೆಲ್ಲರನ್ನೂ ರಕ್ಷಿಸುತ್ತಿದ್ದಾರೆʼ. ಈ ಕುರಿತ ಸಿನಿಮಾವನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದರು.










