Saturday, May 9, 2026

archivekahale news

ಸುದ್ದಿ

ಕಾಫಿನಾಡಲ್ಲಿ ನಡೆಯಿತು ವಂಡರ್ ಪುಲ್ ಜಿಪ್ಸಿ ರೈಡ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ನೀವು ವಿಭಿನ್ನ ಕಾರುಗಳಲ್ಲಿ ಸಾವಿರಾರು ಕಿ.ಮೀ ಡ್ರೈವ್ ಮಾಡಿರಬಹುದು, ದುಬಾರಿ ಕಾರುಗಳಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಪ್ರಯಾಣ ಮಾಡಿರಬಹುದು, ಆದ್ರೆ ಜಿಪ್ಸಿಯಲ್ಲಿ ರೈಡ್ ಮಾಡುವುದು ಇದೆಲ್ಲದ್ದಕ್ಕೂ ಭಿನ್ನ, ಅದ್ರಲ್ಲೂ ವಾಟರ್ ಸ್ಟ್ರೀಮ್‍ಗಳಲ್ಲಿ , ಆಫ್ ರೋಡ್‍ಗಳಲ್ಲಿ ಹಾಗೂ ತೋಟದ ಮಧ್ಯೆವಿರುವ ಸಣ್ಣ ಮಡ್ ರಸ್ತೆಗಳಲ್ಲಿ ಡ್ರೈವ್ ಮಾಡೋದು ಅಂದ್ರೆ ಅದ್ರ ಮಜಾನೆ ಬೇರೆ. ಅಂತಹ ವಿಭಿನ್ನ ರೀತಿಯ ಜಿಪ್ಸಿ ರೈಡ್ ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆಯಿತು. ಹೇಗಿತ್ತು...
ಸುದ್ದಿ

ಉಪಚುನಾವಣೆ ಬಳಿಕ ಹೆಚ್ಚಾಗಲಿದೆ ಬಸ್ ಟಿಕೆಟ್ ದರ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿಗಿನ ವಾರಗಳಲ್ಲಿ ತೈಲ ಬೆಲೆಯಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡುಬರುತ್ತಿದ್ದು ದಿನೇ ದಿನೇ ಇಂಧನ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹೊಡೆತ ಬೀಳುತ್ತಿದ್ದು ಟಿಕೆಟ್ ದರಗಳ ರೇಟ್ ಕೂಡ ಹೆಚ್ಚಾಗ್ತಾ ಇದ್ದು ಕರ್ನಾಟಕ ಸಾರಿಗೆ ವ್ಯವಸ್ಥೆಯ ಟಿಕೆಟ್ ದರಗಳೂ ಸಹ ಹೆಚ್ಚಾಗುವ ಸಾಧ್ಯತೆಯಿದೆ. ಇಂಧನ ಬೆಲೆಯು ಸಾಕಷ್ಟು ಏರಿಕೆಯನ್ನು ಕಂಡಿವೆ. ಹಾಗಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಮೈತ್ರಿ...
ಸುದ್ದಿ

ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಆರೋಪಿಗಳು ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಹೇಮಾಜೆಯ ಮಿನಾವು ಎಂಬ ಸರಕಾರಿ ಗುಡ್ಡ ಜಾಗದಲ್ಲಿ ಸುಮಾರು 4.00 ಗಂಟೆಗೆ ಅಕ್ರಮವಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿವವರನ್ನು ಪೊಲೀಸರು ಸುತ್ತುವರಿದು ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕೋಳಿ ಕಾಲುಗಳಿಗೆ ಬಾಳುಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಮಾಡುತ್ತಿದ್ದ ಹತ್ತು ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ರವೀಂದ್ರ, ನಾರಾಯಣ, ಕೇಶವ, ಈಶ್ವರ, ನಾರಾಯಣ, ಬಾಬು, ಗಣೇಶ್, ರವೀಂದ್ರ ಯಾನೆ...
ಸುದ್ದಿ

ಅಕ್ರಮ ಗೋಸಾಗಟ: ವ್ಯಕ್ತಿಯ ಬಂಧನ – ಕಹಳೆ ನ್ಯೂಸ್

ಬೆಳ್ತಂಗಡಿ: ತೆಕ್ಕಾರು ಗ್ರಾಮದ ಮೂಡಡ್ಕ ಎಂಬಲ್ಲಿ ರಸ್ತೆಯ ಬದಿಯಲ್ಲಿ 11 ಕೆಜಿ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮುನೀರ್ ಅಲಿಯಾಸ್ ಮಹಮ್ಮದ್ ಹುಸೈನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ತೆಕ್ಕಾರು ಗ್ರಾಮದ ವಾಸ ಆನಲಿಕೆ ನಿವಾಸಿಯಾದ ಮುನೀರ್ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964 ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ....
ಸುದ್ದಿ

ಕಂಬಳ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ: ಡಿ.ವಿ.ಸದಾನಂದ ಗೌಡ – ಕಹಳೆ ನ್ಯೂಸ್

ಮಂಗಳೂರು: ಕಂಬಳ ತಡೆಯಲು ಪೆಟಾ ಮಾಡುತ್ತಿರುವುದು ಕರಾವಳಿಯ ಜನರ ಮೇಲಿನ ಮಾನಸಿಕ ಹಿಂಸೆ ಎಂದಿರುವ ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ಕಂಬಳ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಕಂಬಳ ಪ್ರಮುಖರ ಜತೆ ಚರ್ಚಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೆಟಾ ಪ್ರಕರಣ ಅ.8ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಕುರಿತು ಅಟಾರ್ನಿ ಜನರಲ್ ಅವರಲ್ಲಿ ಮಾತನಾಡುತ್ತೇನೆ. ಸಮರ್ಥವಾಗಿ ಕಂಬಳ ಪರವಾಗಿ ವಾದಿಸುವುದಕ್ಕೆ...
ಸುದ್ದಿ

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅ.9 ರಂದು ಕದ್ರಿ ಮೈದಾನದಲ್ಲಿ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಕೇರಳದಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳು ಆರಂಭವಾಗಿವೆ. ಕರ್ನಾಟಕದಲ್ಲೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ಬಲ ಪಡೆಯುತ್ತಿದೆ. ಈ ನಡುವೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ ನಡೆಸಲು ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ನಿರ್ಧರಿಸಿದೆ. ಹೋರಾಟದ ಪೂರ್ವಭಾವಿ ಸಭೆ ಶನಿವಾರ ಸಂಜೆ ನಗರದ ಸಂಘನಿಕೇತನದಲ್ಲಿ ನಡೆಸಲಾಯಿತು. ಮೊದಲ ಹಂತವಾಗಿ ಅಕ್ಟೋಬರ್ 9...
ರಾಜಕೀಯಸುದ್ದಿ

ಕುಟುಂಬದವರನ್ನೇ ಕಣಕ್ಕಿಳಿಸುವುದು ಸರಿಯಲ್ಲ: ಜೆಡಿಎಸ್ ಮುಖಂಡರು – ಕಹಳೆ ನ್ಯೂಸ್

ಬೆಂಗಳೂರು: ಅಪ್ಪ-ಮಕ್ಕಳ ಪಕ್ಷ ಎಂಬ ಅಪವಾದದಿಂದ ಹೊರಬರಲು ವಿಧಾನಸಭಾ ಚುನಾವಣೆಗೆ ಮುನ್ನ ‘ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಗಳು’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಈಗ ಅವರಿಗೆ ಮುಳುವಾಗುತ್ತಿದೆ. ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭರ್ಜರಿ ವಿಜಯ ಪತಾಕೆ ಹಾರಿಸಿದ್ದ ಕುಮಾರಸ್ವಾಮಿ, ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ರಾಮನಗರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಚುನಾವಣೆ ಪ್ರಚಾರಕ್ಕೆ ತೆರಳದಿದ್ದರೂ ನನ್ನನ್ನು ಗೆಲ್ಲಿಸಿದ ಹಾಗೂ ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಿರುವ ಈ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕೆಂಬುದು...
ಸುದ್ದಿ

ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡುವುದೇ ಜೀವನವಾಗಬಾರದು: ವೇಣುಗೋಪಾಲ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡಬೇಕು ಎನ್ನುವ ಆಸೆ ಇರುವುದು ಸಹಜ. ಆದರೆ ಅದೇ ಜೀವನವಾಗವಾರದು. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಕಳೆದು ಹೋದ ಸಮಯವನ್ನು ನೆನೆಸಿಕೊಂಡು ಪಶ್ಚಾತ್ತಾಪ ಪಡುವಂತಾಗಬಾರದು. ನಾವು ಕಲಿತ ವಿದ್ಯೆ ನಮಗೆ ಅನ್ನ ನೀಡುವಂತಾಗಬೇಕು ಎಂದು ಸ್ಯಾಕ್ಸೊಫೋನ್ ವಾದಕ, ಕಲಾವಿದ ವೇಣುಗೋಪಾಲ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು....
1 1,353 1,354 1,355 1,356 1,357 1,459
Page 1355 of 1459