Wednesday, August 5, 2026
ಸುದ್ದಿ

ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಆರೋಪಿಗಳು ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಹೇಮಾಜೆಯ ಮಿನಾವು ಎಂಬ ಸರಕಾರಿ ಗುಡ್ಡ ಜಾಗದಲ್ಲಿ ಸುಮಾರು 4.00 ಗಂಟೆಗೆ ಅಕ್ರಮವಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿವವರನ್ನು ಪೊಲೀಸರು ಸುತ್ತುವರಿದು ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಕೋಳಿ ಕಾಲುಗಳಿಗೆ ಬಾಳುಕತ್ತಿಯನ್ನು ಕಟ್ಟಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಮಾಡುತ್ತಿದ್ದ ಹತ್ತು ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರವೀಂದ್ರ, ನಾರಾಯಣ, ಕೇಶವ, ಈಶ್ವರ, ನಾರಾಯಣ, ಬಾಬು, ಗಣೇಶ್, ರವೀಂದ್ರ ಯಾನೆ ಬೇಬಿ, ರಾಜೇಶ್, ಆಶಿಸ್ ಮನ್ಸೂರ್ ಬಂಧಿತ ಆರೋಪಿಗಳು. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರ ವಶದಲ್ಲಿದ್ದ ರೂ 3,300 ರೂಪಾಯಿ ಮತ್ತು 6 ಹುಂಜ ಕೋಳಿಗಳು ಹಾಗೂ ಬಾಳು ಕತ್ತಿಯನ್ನು ವಶಪಡಿಸಿಕೊಂಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.