Wednesday, May 13, 2026

archivekahale news

ಸುದ್ದಿ

ಕಾಡುಹಂದಿ ಬೇಟೆಯಾಡಿ ಮಾಂಸ ಮಾರಾಟ: ಆರೋಪಿಗಳ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿನ ಕೆರೆ ಏರಿ ಮೇಲೆ ಮೂರು ಕಾಡು ಹಂದಿಯ ಮಾಂಸವನ್ನು ಏಳುಮಂದಿ ಮಾರಾಟ ಮಾಡುತ್ತಿದ್ದರು. ಈ ವೇಳೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ಅರಣ್ಯಾಧಿಕಾರಿಗಳು ಜಂಟಿಯಾಗಿ ದಾಳಿಯನ್ನು ನಡೆಸಿದ್ದಾರೆ. ರವಿ, ಪ್ರತಾಪ, ಜಯಣ್ಣ, ಮಾರಪ್ಪ, ಮಂಜುನಾಥ್, ಮಂಜಪ್ಪ, ನಂಜಪ್ಪ ಎಂಬುವವರು ದೊಡ್ಡಸಾಗರ ಮತ್ತು ಶಿವಪುರ...
ಸುದ್ದಿ

ಯೋಧರ ತ್ಯಾಗದಕಥೆ: ಪತ್ನಿಯ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ವೈರಲ್‌ – ಕಹಳೆ ನ್ಯೂಸ್

ಸುಳ್ಯ: ಪಂಜ ಸಮೀಪದ ಕೂತ್ಕುಂಜ ಗ್ರಾಮ ಕಕ್ಯಾನ ನಿವಾಸಿ ಯೋಧ ಸುದರ್ಶನ ಗೌಡ ತನ್ನ ಪತ್ನಿ ಲಾವಣ್ಯ ಅವರ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ಈಗ ವೈರಲ್‌ ಆಗಿದೆ. 'ಬೇಸರಿಸಬೇಡ, ಇಲ್ಲಿ ನೆಟ್‌ವರ್ಕ್‌ ಇಲ್ಲ. 1,300 ಕಿ.ಮೀ. ದೂರ ಇದ್ದೇನೆ. 10 ದಿನ ಆಯಿತು ನೆಟ್‌ವರ್ಕ್‌ ಸಿಗುವುದೇ ದುಸ್ತರ ಎನಿಸಿದೆ. ಹಾಗಾಗಿ ನಿನ್ನ ಹುಟ್ಟುಹಬ್ಬದ ಮೊದಲೇ ಮೆಸೇಜ್‌ ಮಾಡಿರುವೆ. ಅಮ್ಮನಿಗೆ ತಿಳಿಸು, ರಜೆ ಸಿಕ್ಕರೆ ದೀಪಾವಳಿಗೆ ಬರುವೆ, ವಿಶ್‌ ಯು ಹ್ಯಾಪಿ ಬರ್ತ್‌ಡೆ...' ಜಮ್ಮು...
ಸುದ್ದಿ

ಇಂಡಸ್ಟ್ರಿಯಲ್ಲಿ ಕೆಲಸ ಸಂದರ್ಭದಲ್ಲಿ ಅವಘಡ: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು – ಕಹಳೆ ನ್ಯೂಸ್

ಸುಳ್ಯ: ವಿದ್ಯುತ್ ಶಾಕ್ ತಗುಲಿ ಯುವಕ ಮೃತಪಟ್ಟ ಘಟನೆ ಸುಳ್ಯ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರ ಸಮೀಪ ಆಲೆಟ್ಟಿ ಕ್ರಾಸ್‍ನ ಗುರುಂಪುವಿನ ಇಂಡಸ್ಟ್ರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದುಗ್ಗಲಡ್ಕ ಸಮೀಪದ ಕಂದಡ್ಕದ ನಾಗರಾಜ್(18) ಮೃತಪಟ್ಟ ಯುವಕ. ಸೋಮವಾರ ಬೆಳಗ್ಗೆ ಬಂದು ಇಂಡಸ್ಟ್ರಿಯಲ್ಲಿ ಕೆಲಸ ಆರಂಭಿಸಿದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಯುವಕ ಓರ್ವನೇ ಕೆಲಸ ನಿರ್ವಹಿಸುತ್ತಿದ್ದ. ಯುವಕ ಬಿದ್ದಿರುವುದು ಗಮನಿಸಿ ಸ್ಥಳೀಯರು ಇಂಡಸ್ಟ್ರೀಸ್‍ನ ಮಾಲಕನಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ...
ಸುದ್ದಿ

ಒಂದೇ ಕುಟುಂಬದ ಇಬ್ಬರ ಸಾವು – ಕಹಳೆ ನ್ಯೂಸ್

ತೊಕ್ಕೊಟ್ಟು: ಉಳ್ಳಾಲ ಹಳೆಕೋಟೆಯ ಕುಟುಂಬವೊಂದರ ಅಪ್ಪ ಹಾಗೂ ಮಗಳು ಒಂದೇ ದಿನ ಮೃತಪಟ್ಟ ಘಟನೆ ನಡೆದಿದೆ. ಮಗಳು ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ್ದು ತಂದೆ ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.  ಹಳೆಕೋಟೆಯ ಮಹಮ್ಮದ್‌(80) ಹಾಗೂ ಅವರ ಪುತ್ರಿ ಜಮೀಲಾ(38) ಮೃತಪಟ್ಟವರು. ಜಮೀಲಾ ಜ್ವರದಿಂದ ಬಳಲುತ್ತಿದ್ದುದರಿಂದ ನಾಲ್ಕು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3.45ಕ್ಕೆ ಮೃತಪಟ್ಟಿದ್ದಾರೆ. ಜಮೀಲಾ ಅವರ ಸಾವಿನ ಕುರಿತಾಗಿ ಮನೆಮಂದಿ ಮಹಮ್ಮದ್‌ ಅವರಿಗೆ ತಿಳಿಸಿರಲಿಲ್ಲ. ಹಾಗಿದ್ದರೂ...
ಸುದ್ದಿ

ಸ್ವಚ್ಛತೆಯ ಉದ್ದೇಶದಿಂದ ಕಸಾಯಿಖಾನೆಯನ್ನು ಆಧುನೀಕರಣಗೊಳಿಸಲು ಸಲಹೆ ನೀಡಲಾಗಿದೆ: ಖಾದರ್ – ಕಹಳೆ ನ್ಯೂಸ್

ಮಂಗಳೂರು: ನಗರ ಸ್ವಚ್ಛವಾಗಿರಬೇಕೆಂಬ ಹಿನ್ನೆಲೆಯಲ್ಲಿ ಕುದ್ರೋಳಿ ಕಸಾಯಿಖಾನೆಯನ್ನು ಆಧುನೀಕರಣಗೊಳಿಸಲು ಸಲಹೆ ನೀಡಲಾಗಿದೆ. ಆದರೆ ಬಿಜೆಪಿ ಜನಪ್ರತಿನಿಧಿಗಳು ಇದರ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಖಾದರ್ ಅವರು ಕಸಾಯಿಖಾನೆಗೆ 15 ಕೋಟಿ ರೂ. ನೀಡಿದ್ದಾರೆಂಬ ಆರೋಪದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಜನಪ್ರತಿನಿಧಿಗಳು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. 2011ರಲ್ಲಿ...
ಸುದ್ದಿ

ಕೆಎಸ್ಸಾರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಎಂಬಲ್ಲಿ ಭಾನುವಾರ ಕೆಎಸ್ಸಾರ್ಟಿಸಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ ಮಂಗಳೂರು ಕುಡುಪು ನಿವಾಸಿ ಚರಣ್(18) ಹಾಗೂ ಬಂಟ್ವಾಳ ತಾಲೂಕು ವಾಮದಪದವು ಸಮೀಪದ ದಂಡೆಗೋಳಿ ನಿವಾಸಿ ಮುಹಮದ್ ನೌಶಾದ್(18) ಮೃತಪಟ್ಟವರು. ಅವರಿಬ್ಬರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಐಟಿಐ ವಿದ್ಯಾರ್ಥಿಗಳಾಗಿದ್ದು, ಸ್ನೇಹಿತರಾದ್ದರು. ಭಾನುವಾರ ಬೆಳಗ್ಗೆ ಬಿ.ಸಿ ರೋಡ್‌ನಿಂದ ಕಾರಿಂಜ ದೇವಸ್ಥಾನ ಕಡೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೆದ್ದಾರಿಯಲ್ಲಿ...
ಸುದ್ದಿ

ಭಕ್ತರೊಬ್ಬರ ಹರಕೆ ಫಲಿಸಿದ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕೆಗೆ ಚಿನ್ನದ ಖಡ್ಗ ಅರ್ಪಣೆ – ಕಹಳೆ ನ್ಯೂಸ್

ಉಡುಪಿ: ತಮಿಳುನಾಡಿನ ಭಕ್ತರೊಬ್ಬರು ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಚಿನ್ನಡ ಖಡ್ಗವನ್ನು ಹರಕೆ ರೂಪದಲ್ಲಿ ಅರ್ಪಿಸಿದ್ದಾರೆ. ತಮ್ಮ ಮನದ ಇಚ್ಛೆ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಅವರು 1 ಕೆಜಿ ತೂಕದ ಚಿನ್ನಡ ಖಡ್ಗವನ್ನು ಮೂಕಾಂಬಿಕೆಗೆ ಸಮರ್ಪಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು ಮೂಲದ ಡಾ.ನಳಿನ್ ವಿಮಲ್ ಕುಮಾರ್ ಎಂಬುವವರು ಶ್ರೀ ಮೂಕಾಂಬಿಕೆಯಲ್ಲಿ ಕೆಲದಿನಗಳ ಹಿಂದೆ ಹರಕೆ ಹೊತ್ತುಕೊಂಡಿದ್ದರು. ಹರಕೆ ಫಲಿಸಿದ ಹಿನ್ನೆಲೆಯಲ್ಲಿ ಡಾ.ನಳೀನ್ ವಿಮಲ್ ಕುಮಾರ್ 30 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಖಡ್ಗವನ್ನು ತಂದು ಶ್ರೀ...
ಸುದ್ದಿ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ, ಮತ್ತೆ ಮಳೆ ಸಾಧ್ಯತೆ – ಕಹಳೆ ನ್ಯೂಸ್

ಬೆಂಗಳೂರು: ವಾಯುಭಾರ ಕುಸಿತದ ಪ್ರಭಾವ ಸಮುದ್ರದ ಮೇಲೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದರೂ ಬದಲಾದ ವಾಯುಗುಣದಿಂದ ಮಾರುತಗಳ ದಿಕ್ಕು ಬದಲಾಗಿದೆ. ಹಾಗಾಗಿ, ಮಳೆಯ ನಿರೀಕ್ಷೆ ಕಡಿಮೆಯಾಗಿದೆ. ಆದರೂ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯ ಕೆಲ ಭಾಗದಲ್ಲಿ 2-3 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ...
1 1,351 1,352 1,353 1,354 1,355 1,459
Page 1353 of 1459