Thursday, May 14, 2026

archivekahale news

ಸುದ್ದಿ

ಪುತ್ತೂರು – ನಗರದಲ್ಲಿ ಬಾಂಬ್ ಬ್ಲಾಸ್ಟ್: ಕೋಮುವಾದಿ ಭಯೋತ್ಪಾದನಾ ಸಂಘಟನೆಗಳ ಶಂಕೆ – ಕಹಳೆ ನ್ಯೂಸ್

ಪುತ್ತೂರು: ನಿನ್ನೆ ರಾತ್ರಿ 2 ಗಂಟೆಯ ವೇಳೆ ಪುತ್ತೂರಿನ ನಾರಾಯಣ ಭಟ್ ಎಂಬವರ ಮನೆಯ ಮೇಲೆ ಕಚ್ಛಾ ಬಾಂಬ್ ಬ್ಲಾಸ್ಟ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪುತ್ತೂರಿನ ನಗರದ ನಿವಾಸಿಯಾದ ನಾರಾಯಣ ಭಟ್ ರವರ ಮನೆಯ ಮೇಲೆ ನಡೆಸಿದ ಬಾಂಬ್ ಬ್ಲಾಸ್ಟ್ ನಿಂದಾಗಿ ಅವರ ಪತ್ನಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು ಈ ಹಿಂದೆ ಮುರದ ಜುಮ್ಮಾ ಮಸೀದಿ ಕಮಿಟಿ...
ಸುದ್ದಿ

ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ತಾಲೂಕಿನ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಜಿಲ್ಲೆಯ ರಾಜಕೀಯ ಧುರೀಣರ ಕಣ್ಣು ಇತ್ತ ಹಾಯಿಸುವಂತೆ ಮಾಡಿದೆ. ಕಾಂಗ್ರೇಸ್ ಪಕ್ಷದಡಿಯಲ್ಲಿ ಸ್ಪರ್ಧೆ ಮಾಡಿ ಬಳಿಕ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ ಪ್ರಭಾಕರ ಪ್ರಭು ಅವರ ತೆರವಾದ ಸ್ಥಾನಕ್ಕೆ ಈ ಚುನಾವಣೆ .ಆ.28 ರಂದು ನಡೆಯಲಿದೆ. ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯದ ದಿನೇಶ್ ಸುಂದರ್ ಶಾಂತಿಯವರನ್ನು ಪ್ರಭು ಅವರಿಗೆ ಎದುರಾಳಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಕಣಕ್ಕಿಳಿಸಿದ್ದು ಎರಡು...
ಸುದ್ದಿ

ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರಿಗೆ ಡಾಕ್ಟರೇಟ್ ಪದವಿ – ಕಹಳೆ ನ್ಯೂಸ್

ಕಾಸರಗೋಡು: ಇಲ್ಲಿನ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಡಾ. ರಾಧಾಕೃಷ್ಣ ಎನ್. ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ `ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾಪ್ರಬಂಧವು ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹವಾಗಿದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ತಿಳಿಸಿದೆ. ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಿಲಯದ...
ಸುದ್ದಿ

ಮಾರ್ಬಲ್ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ: ಗಾಯಾಳು ಆಸ್ಪತ್ರೆಗೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ಲೇಟರಿ ಬಳಿ ಮಾರ್ಬಲ್ ಅನ್ಲೋಡಿಂಗ್ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮಾರ್ಬಲ್ ಬಿದ್ದು ಕಾರ್ಮಿಕನ ಕಾಲಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಕಾರ್ಮಿಕನನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಿದ್ದ ವಿಮಾನನಿಲ್ದಾಣದ ಅಂಬುಲೆನ್ಸ್ ಕಾರ್ಮಿಕನ ಸಹಾಯಕ್ಕೆ ಬರಲಿಲ್ಲ. ಆದ್ರೆ ಮಂಗಳೂರಿನಿಂದ ವಿಮಾನ ಪ್ರಯಾಣಿಕರೊಬ್ಬರನ್ನು ಡ್ರಾಪ್‌ಗೆ ಹೋಗಿದ್ದ ಕ್ಯಾಬ್ ಚಾಲಕ ಕೂಡಲೇ ಕಾರ್ಮಿಕನನ್ನು ತನ್ನ ಕಾರಲ್ಲಿ ಹಾಕಿ ಮಂಗಳೂರಿನ ಏ.ಜೆ ಆಸ್ಪತ್ರೆಗೆ...
ಸುದ್ದಿ

ಮಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದ ಬಸ್‌ಗಳ ವಶ – ಕಹಳೆ ನ್ಯೂಸ್

ಮಂಗಳೂರು: ನಿಯಮ ಉಲ್ಲಂಘಿಸಿದ ಬಸ್‌ಗಳನ್ನು ಆರ್ ಟಿ ಓ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಿಯಮವನ್ನು ಉಲ್ಲಂಘಿಸಿ ಸಿಟಿ ಬಸ್‌ಗಳು ಓಡಾಟ ಮಾಡುತ್ತಾ ಇದ್ದವು. ಪೊಲೀಸರು ಮತ್ತು ಆರ್ ಟಿ ಒ ಜಂಟಿ ಕಾರ್ಯಚರಣೆ ನಡೆಸಿ ಒಟ್ಟು 35 ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ....
ಕ್ರೀಡೆಸುದ್ದಿ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಸವಾಲು – ಕಹಳೆ ನ್ಯೂಸ್

ಡೆನ್ಮಾರ್ಕ್: ಒಲಿಂಪಿಕ್ ಪದಕ ವಿಜೇತೆಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಸಿಂಧುಗೆ 3ನೇ ಶ್ರೇಯಾಂಕ ಸಿಕ್ಕಿದ್ದು, ಸೈನಾ ಶ್ರೇಯಾಂಕ ರಹಿತವಾಗಿ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಸಿಂಧು ಅಮೆರಿಕದ ಬೀವೆನ್ ಝಾಂಗ್ ವಿರುದ್ಧ ಆಡಲಿದ್ದಾರೆ. ವಿಶ್ವ ನಂ.11 ಸೈನಾಗೆ ಮೊದಲ ಸುತ್ತಲ್ಲಿ ಹಾಂಕಾಂಗ್‌ನ ಚೆಯುಂಗ್ ಯಿ ಎದುರಾಗಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.6 ಕಿದಂಬಿ ಶ್ರೀಕಾಂತ್‌ಗೆ 7ನೇ...
ಸುದ್ದಿ

ಅಂತರ್ ವಿವಿ ಸ್ಪರ್ಧೆಯಲ್ಲಿ ವಿವೇಕಾನಂದದ ಸ್ವಾತಿ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸ್ವಾತಿ ಎನ್ ವಿ ಅವರು ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿವಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಉತ್ಸವದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಬನ್ನೂರಿನ ನೆಕ್ಕಿಲ ನಿವಾಸಿ ವಸಂತ ಸುವರ್ಣ ಹಾಗೂ ಲತಾ ಸುವರ್ಣ ದಂಪತಿ ಪುತ್ರಿ ಮತ್ತು ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಅವರ...
ಸುದ್ದಿ

ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ದೊರಕುತ್ತದೆ: ಪ್ರೊ.ಸುಬ್ಬಪ್ಪ ಕೈಕಂಬ

ಪುತ್ತೂರು: ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾದದ್ದು ವಿದ್ಯಾರ್ಥಿಗಳ ಧರ್ಮ. ಮಾಡುವ ಕಾಯಕದಲ್ಲಿ ಪ್ರೀತಿಯನ್ನಿಟ್ಟರೆ ಮಾತ್ರ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ಖಂಡಿತವಾಗಿಯೂ ದೊರಕುತ್ತದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಬ್ಬಪ್ಪ ಕೈಕಂಬ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ಆಯೋಜಿಸಿದ ಕಳೆದ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ...
1 1,336 1,337 1,338 1,339 1,340 1,459
Page 1338 of 1459