ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದ ಕಾಡಾನೆ ದಾಳಿ – ಕಹಳೆ ನ್ಯೂಸ್
ಬೆಳ್ತಂಗಡಿ: ತಾಲೂಕಿನ ಅರಸಿನ ಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಹತ್ಯಡ್ಕ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಮತ್ತೆ ಕಾಡಾನೆ ಕಾಟ ಆರಂಭಗೊಂಡಿದ್ದು, ಗ್ರಾ.ಪಂ. ವತಿಯಿಂದ ಅಳವಡಿಸಿದ್ದ ಸೋಲಾರ್ ದೀಪಗಳ ಬ್ಯಾಟರಿ ಕದ್ದಿರುವುದೇ ಈ ತೊಂದರೆಗೆ ಪ್ರಮುಖ ಕಾರಣ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ. ಕೊಂಚ ನಿಟ್ಟುಸಿರು ಬಿಟ್ಟಿದ್ದ ಕೃಷಿಕರು ಮತ್ತೆ ಕಾಡಾನೆಗಳ ಕಾಟದಿಂದ ನಿದ್ದೆಗೆಟ್ಟಿದ್ದಾರೆ. ಕಿಡಿಗೇಡಿಗಳ ಸಣ್ಣ ಕೃತ್ಯವೊಂದು ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ಸಂಜೆ 6.30ರ ವೇಳೆಗೆ ಆನೆಗಳ ಕಾಟ ಆರಂಭಗೊಂಡರೆ, ರಾತ್ರಿ 1 ಗಂಟೆಯವರೆಗೂ...







