Thursday, May 14, 2026

archivekahale news

ಸುದ್ದಿ

ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿಯಿಂದ ಹುತಾತ್ಮ ಯೋಧರ ಕುಟುಂಬಿಕರಿಗೆ ಚೆಕ್ ವಿತರಣೆ – ಕಹಳೆ ನ್ಯೂಸ್

ಮೈಸೂರು- ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ಫೊಸಿಸ್ ವತಿಯಿಂದ ತಲಾ 10ಲಕ್ಷ ರೂ ನೀಡಲಾಗಿದ್ದು, ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹುತಾತ್ಮ ಯೋಧರ ಕುಟುಂಬಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಚೆಕ್ ವಿತರಿಸಿ ಆರು ಹುತಾತ್ಮ ಯೋಧರ ಕುಟುಂಬಿಕರಿಗೆ ಧನ ಸಹಾಯ ಮಾಡಿದರು. ಮೈಸೂರು ತಾಲೂಕಿನ ರಮೇಶ್, ಎಚ್.ಟಿ.ಕೋಟೆ ತಾಲೂಕಿನ ಮಹೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಹಾಗೂ ಸಾಗರ್ ಕುಟುಂಬಿಕರು ಚೆಕ್ ಪಡೆದರು. ಬಳಿಕ ಮಾತನಾಡಿದ ಸುಧಾಮೂರ್ತಿ ಈ ಹಣವನ್ನು ಮುಂಜಿ ಮದುವೆ ಎಂದು...
ಸುದ್ದಿ

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ – ಕಹಳೆ ನ್ಯೂಸ್

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಅದೇನೆಂದ್ರೆ ಹಾಸ್ಟೆಲ್, ವಸತಿ ಶಾಲೆ ಸೇರ ಬಯಸುವ ವಿದ್ಯಾರ್ಥಿಗಳ ಕುಟುಂಬದ ಆದಾಯ ಮಿತಿಯನ್ನು 2.50 ಲಕ್ಷ ರೂ.ಗೆ ಏರಿಸಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಹಿಂದೆ 44,000 ರೂ. ಹಾಗೂ ವಸತಿ ಶಾಲೆ ಪ್ರವೇಶಕ್ಕೆ 1 ಲಕ್ಷ ರೂ. ಆದಾಯ ಮಿತಿ ಇತ್ತು. ಆದರೆ ಈಗ ಕುಟುಂಬದ ಆದಾಯದ ಮಿತಿಯನ್ನು 2.50 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಬಾರಿ ಹಾಸ್ಟೆಲ್, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ...
ಸುದ್ದಿ

ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಆತ್ಮಹತ್ಯೆ – ಕಹಳೆ ನ್ಯೂಸ್

ಮಂಡ್ಯ: ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ಮಂಗಳವಾರ ನಡೆದಿದೆ. ಚಿಕ್ಕಗೌಡನದೊಡ್ಡಿ ನಿವಾಸಿ ಲೋಕೇಶ್(32) ಆತ್ಮಹತ್ಯೆ ಮಾಡಿಕೊಂಡವರು. ಲೋಕೇಶ್ ಮಹೀಂದ್ರ ಟ್ರ್ಯಾಕ್ಟರ್ ಶೋ ರೂಂ ನಡೆಸುತ್ತಿದ್ದರು. ಕಳೆದ ನಗರ ಸಭೆ ಚುನಾವಣೆಯಲ್ಲಿ 34ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಸ್ವರ್ಣಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ಇಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಪೂರ್ವ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಶೋ...
ಸುದ್ದಿ

ಎಚ್1 ಎನ್1 ಸೋಂಕಿಗೆ ಬಲಿ: ತೀವ್ರ ಆತಂಕಕ್ಕೀಡಾದ ಗ್ರಾಮಸ್ಥರು – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳದ ಸಜಿಪನಾಡು ಯುವತಿಯೊಬ್ಬಳು ಶಂಕಿತ ಎಚ್1 ಎನ್1 ಸೋಂಕು ಬಾಧಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಯಿ ಮತ್ತು ಮಗಳು ಇಬ್ಬರೂ ಈ ಶಂಕಿತ ಎಚ್1 ಎನ್ 1 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಜಿಪನಾಡು ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ. ಮೃತ ಯುವತಿ ಝರೀನಾ (22) ತೀವ್ರ ಜ್ವರದಿಂದ ನರಳುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಅ.16) ಮೃತಪಟ್ಟಿದ್ದಾಳೆ....
ಸುದ್ದಿ

ನಿಮ್ಮೊಳಗೂ “ಆತ್ಮ” ಇದೆ ಎಂದು ನಂಬಿದ್ದರೆ, ಆ ಆತ್ಮದ ತೂಕ ಎಷ್ಟು ಗೊತ್ತಾ?- ಅಮೇರಿಕಾ ಮೂಲದ ವಿಜ್ಞಾನಿಯಿಂದ ಬಹಿರಂಗವಾಗಿದೆ “ಆತ್ಮ”ದ ತೂಕ – ಕಹಳೆ ನ್ಯೂಸ್

ಪ್ರಪಂಚದ ಹಲವು ಧರ್ಮಗಳ ಮತ್ತು ತತ್ತ್ವಶಾಸ್ತ್ರ ಪದ್ಧತಿಗಳ ಪ್ರಕಾರ ಆತ್ಮವು ಜೀವನದ ನಿರಾಕಾರ ಚೈತನ್ಯವೆಂದು ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಆತ್ಮವು ಚಿರಂತನವೆಂದು ಎಲ್ಲಾ ಪದ್ಧತಿಗಳು ನಂಬುತ್ತವೆಯಾದರೂ ಬೇರೆ ಬೇರೆ ಪದ್ಧತಿಗಳಲ್ಲಿ ಮೃತ್ಯುವಿನ ನಂತರ ಆತ್ಮದ ವಿಧಿಯೇನೆಂದು ಬೇರೆ ಬೇರೆ ಅಭಿಪ್ರಾಯಗಳನ್ನು ಹೇಳುತ್ತವೆ. ಆದರೆ ದೇಹವನ್ನು ಆತ್ಮವು ಬಿಟ್ಟು ಹೋದಾಗ ಆ ವ್ಯಕ್ತಿಯ, ಭೂಮಿಯ ಮೇಲಿನ ದಿನಗಳು ಕೊನೆಗೊಂಡಂತೆ ಎನ್ನುವುದು ಕಟು ಸತ್ಯ!! ವಿಶ್ವದ ಪ್ರತಿಯೊಂದು ಧರ್ಮದಲ್ಲಿ ಆತ್ಮದ ಬಗ್ಗೆ ನಂಬಿಕೆ ಇದೆಯಾದರು...
ಸುದ್ದಿ

ಆನ್ ಲೈನ್ ವ್ಯಾಪಾರ ಏಜೆ೦ಟರೆಂದು ಹಣ ಪಡೆದು ವಂಚನೆ: ಇಬ್ಬರ ಬಂಧನ – ಕಹಳೆ ನ್ಯೂಸ್

ಕಾಸರಗೋಡು: ಆನ್ ಲೈನ್ ವ್ಯಾಪಾರದ ಏಜೆ೦ಟರೆಂದು ಹಲವರಿಂದ ಹಣ ಪಡೆದು ವಂಚನೆ ನಡೆಸಿದ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೋಝಿಕ್ಕೋಡುನ ಫಾರಿಸ್(21) ಮತ್ತು ಪಿ.ವಿ ಆದರ್ಶ್ (21) ಎಂದು ಗುರುತಿಸಲಾಗಿದೆ. ಆನ್ ಲೈನ್ ಮೂಲಕ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಮಾರಾಟ ಮಾಡುವ ಏಜೆ೦ಟರ ಸೋಗಿನಲ್ಲಿ ಬಂದ ಇವರು ಹಲವಾರು ಮಂದಿಯಿಂದ ಲಕ್ಷಾಂತರ ರೂಪಾಯಿವನ್ನು ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು ಅಲ್ಲದೆ ಮಂಗಳೂರು, ಕಾಞ೦ಗಾಡ್, ತಿರೂರು, ಆಲಪ್ಪುಝ, ಎರ್ನಾಕುಲಂ ಮೊದಲಾದಡೆಗಳಿಂದ ಹಲವು...
ಸುದ್ದಿ

ಕಸಾಯಿಖಾನೆ ವಿವಾದ, ದ.ಕ. ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತೇನೆ: ಖಾದರ್ – ಕಹಳೆ ನ್ಯೂಸ್

ಮಂಗಳೂರು: ಕಸಾಯಿ ಖಾನೆ ವಿವಾದ ದಿನಕ್ಕೊಂದರಂತೆ ವಿವಾದವನ್ನು ಸೃಷ್ಟಿಸುತ್ತಿದ್ದು, ಈ ಕುರಿತಂತೆ ವಸತಿ ಸಚಿವ ಯು ಟಿ ಖಾದರ್ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ವಿವಾದ ವಿಚಾರ ಬಗ್ಗೆ ನಾನು ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನದ ಸಂದೇಶಗಳು ಗೊಂದಲ ಸೃಷ್ಟಿಸಿವೆ. ಗೋಶಾಲೆಗೂ ಅನುದಾನ ನೀಡಬೇಕೆಂದು ಮನವಿ ಮಾಡುತ್ತಿದ್ದು ಶೀಘ್ರವೇ ದ.ಕ. ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತೇನೆಂದು ಹೇಳಿಕೆಯನ್ನು ನೀಡಿದರು....
ಸುದ್ದಿ

ಯುವಕ ಆತ್ಮಹತ್ಯೆ: ಡೆತ್‌ನೋಟ್ ನಲ್ಲಿ ಆತಂಕಕಾರಿ ಮಾಹಿತಿ – ಕಹಳೆ ನ್ಯೂಸ್

ಉಡುಪಿ: ಉಗ್ರ ಸಂಘಟನೆಯಿಂದ ನನಗೆ ಬೆದರಿಕೆ ಇದೆ. ನನ್ನ ಕುಟುಂಬಕ್ಕೂ ಅಪಾಯ ಇದೆ. ನನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೇಶ್ವರದಲ್ಲಿ ಸೋಮವಾರ ನಡೆದಿದೆ. ವಿವೇಕ್ (23)ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವಕ. ಕುಂದಾಪುರದ ಮಾರ್ಕೋಡು ಬಬ್ಬರಿಮಕ್ಕಿಯಲ್ಲಿ ಘಟನೆ ನಡೆದಿದ್ದು, ಮೃತ ಯುವಕ ಉಡುಪಿಯ ರಿಲಯನ್ಸ್ ಫೌಂಡೇಷನ್ ನ ಕೃಷಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾನೆ. ಡೆತ್ ನೋಟ್ ಜನರನ್ನು ಬೆಚ್ಚಿ ಬೀಳಿಸಿದ್ದು, ನನ್ನ...
1 1,335 1,336 1,337 1,338 1,339 1,459
Page 1337 of 1459