Thursday, June 11, 2026

archiveComputer

ಸುದ್ದಿ

ಕಂಪ್ಯೂಟರ್‌ನಲ್ಲಿ ಕಳೆದು ಹೋಗಿ ಕೃಷಿ ಮರೆಯದಿರಿ: ಶ್ರೀನಿವಾಸ್ ಪೈ – ಕಹಳೆ ನ್ಯೂಸ್

ಪುತ್ತೂರು: ಕೃಷಿಯನ್ನು ಮರೆತು ಕಂಪ್ಯೂಟರ್‌ನಲ್ಲಿ ಕಳೆದು ಹೋಗಿರುವ ಯುವಜನತೆಗೆ ಕೃಷಿಯ ಪ್ರಾಯೋಗಿಕ ಅನುಭವದ ಅವಶ್ಯಕತೆಯಿದೆ. ನಮ್ಮ ಹೊಟ್ಟೆ ತುಂಬಿಸುವ ಅಕ್ಕಿಯನ್ನು ಯಾವ ರೀತಿ ಬೆಳೆಸಲಾಗುತ್ತದೆ ಎಂದು ತಿಳಿಸುವ ಅವಶ್ಯಕತೆಯಿದೆ. ಕೃಷಿಯನ್ನು ಮರೆಯದೆ ಪ್ರವೃತಿಯಾಗಿಯಾದರೂ ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ ಗ್ರಾಮ ವಿಕಾಸ ಸಮಿತಿ, ಪುತ್ತೂರು ಸಿಟಿ ರೋಟರಿ ಕ್ಲಬ್, ಕಾಲೇಜಿನ ಐಕ್ಯೂಎಸಿ ಹಾಗೂ...