Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಚುನಾವಣೆ ಬರುತ್ತಿದ್ದಂತೆಯೇ ವಿದೇಶಿ ಕರೆನ್ಸಿ ಕಳ್ಳಸಾಗಣಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ ಕೇರಳ ಸಿಎಂ ಪಿಣರಾಯಿ ವಿಜಯನ್– ಕಹಳೆ ನ್ಯೂಸ್

ಎರ್ನಾಕುಲಂ : ಕೇರಳ ಸಿಎಂ ವಿದೇಶಿ ಕರೆನ್ಸಿ ಕಳ್ಳಸಾಗಣಿಕೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಸಿಲುಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್ ಅವರು, ತಾನು ಪಿಣರಾಯಿ ವಿಜಯನ್ ಸೂಚನೆಯ ಮೇರೆಗೆ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಿರುವುದಾಗಿ ಹೇಳಿಕೆ ನೀಡಿದ್ದು, ಇದೀಗ ಕೇರಳ ಸಿಎಂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಕೂಡ ಸಿಲುಕಿದ್ದಾರೆ. ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್,...
ಹೆಚ್ಚಿನ ಸುದ್ದಿ

ಮಾರ್ಚ್ 20 ಮತ್ತು 21 ರಂದು ಕರ್ನಾಟಕದ ಸಾವಯವ ರೈತರು ಬೇಸಾಯ ಮಾಡಿದ ಉತ್ಪನ್ನಗಳ ಬೃಹತ್ ಮಾರಾಟ-ಕಹಳೆ ನ್ಯೂಸ್

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಕರ್ನಾಟಕದ ಸಾವಯವ ರೈತರು ಬೇಸಾಯ ಮಾಡಿದ ಉತ್ಪನ್ನಗಳ ಬೃಹತ್ ಮಾರಾಟ ಮಾರ್ಚ್ 20 ಮತ್ತು 21 ರಂದು ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಶ್ರೀ ಶರವು ದೇವಸ್ಥಾನದ ಬಳಿ ಇರುವ ಬಾಳಂಭಟ್ ಸಭಾಂಗಣದಲ್ಲಿ ನಡೆಯಲಿದೆ....
ಹೆಚ್ಚಿನ ಸುದ್ದಿ

ಮದ್ದಡ್ಕದ ಖ್ಯಾತ ಉದ್ಯಮಿ ನಾಪತ್ತೆ-ಕಹಳೆ ನ್ಯೂಸ್

ಮದ್ದಡ್ಕ : ಖ್ಯಾತ ಉದ್ಯಮಿ, ಮದ್ದಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನು ಫಾಸ್ಟ್ ಫುಡ್ ಸಂಸ್ಥೆಯ ಮಾಲಕ ಅಬ್ದುಲ್ ರಹಿಂ ರವರು ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದಾರೆ. ಇವರು ಮಾರ್ಚ್ 1ರಂದು ಬೆಳ್ತಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಇದುವರೆಗೂ ಮರಳಿಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಫಾತಿಮಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಬ್ದುಲ್ ರಹಿಂರರು ವ್ಯವಹಾರದಲ್ಲಿ ಬಹಳ ನಷ್ಟ ಅನುಭವಿಸಿದ್ದು, ಇದೇ ಕಾರಣದಿಂದ ತುಸು ಚಿಂತೆಗೀಡಾಗಿದ್ದರು...
ಹೆಚ್ಚಿನ ಸುದ್ದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ತುಂಬು ಗರ್ಭಿಣಿ ಶ್ರೇಯಾ ರೈ ನಿಧನ- ಕಹಳೆ ನ್ಯೂಸ್

ದುಬೈ : ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಮತ್ತು ತುಂಬು ಗರ್ಭಿಣಿ ಶ್ರೇಯಾ ರೈ (ಸೌಮ್ಯ ರೈ) ಯವರು ನ್ಯುಮೋನಿಯಾಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ದುಬೈಯಲ್ಲಿ ಶುಕ್ರವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರು ಕಳಸದವರಾಗಿರುವ ಶ್ರೇಯಾ, ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ.ಧ.ಮಂ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಪಡುಬಿದ್ರಿ ಮೂಲದ ಪವನ್ ಶೆಟ್ಟಿಯವರನ್ನು ಮದುವೆಯಾದ ಬಳಿಕ ಶ್ರೇಯಾ ಗಂಡನೊಂದಿಗೆ ದುಬೈನಲ್ಲಿ ವಾಸವಾಗಿದ್ದರು. 7 ತಿಂಗಳ...
ಹೆಚ್ಚಿನ ಸುದ್ದಿ

ಮಾರ್ಚ್ 6ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ-ಕಹಳೆ ನ್ಯೂಸ್

ಕ.ವಿ.ಪ್ರ.ನಿ.ನಿ. 110/11 ಕೆವಿ ವಿದ್ಯುತ್ ಉಪಕೇಂದ್ರ ಕರಾಯದಲ್ಲಿ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾರ್ಚ್ 6 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 11ಕೆವಿ ಬಂದಾರು, ಮುಗೆರಡ್ಕ, ಕಲ್ಲೇರಿ ಟೌನ್, ಉಪ್ಪಿನಂಗಡಿ ಟೌನ್ ಮತ್ತು ಕೆಮ್ಮರ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ....
ಹೆಚ್ಚಿನ ಸುದ್ದಿ

ಕಾರ್ಕಳದಲ್ಲಿ ಕೋಣಗಳೊಂದಿಗೆ ಕಂಬಳ ಕೆರೆಗೆ ಇಳಿದ ಆರನೇ ತರಗತಿಯ ಬಾಲಕಿ-ಕಹಳೆ ನ್ಯೂಸ್

ಕಾರ್ಕಳ : ಬಜಗೋಳಿಯ ಬಾಲಕ ಇತ್ತೀಚೆಗೆ ಕೋಣಗಳ ಜೊತೆ ಓಡಿ ಸಂಚಲನ ಮೂಡಿಸಿದ್ದು, ಇದೀಗ ಕಾರ್ಕಳ ತಾಲೂಕಿನ ಮಿಯ್ಯಾರುವಿನಲ್ಲಿ ನಡೆದ ಲವ-ಕುಶ ಕಂಬಳದಲ್ಲಿ ಪರಮೇಶ್ವರ ಭಟ್ ಅವರ ಪುತ್ರಿ ಚೈತ್ರಾ ಮೊದಲ ಬಾರಿಗೆ ಕಂಬಳ ಕೆರೆಗೆ ಕೋಣಗಳೊಂದಿಗೆ ಇಳಿಯುವ ಮೂಲಕ ಸುದ್ದಿಯಾಗಿದ್ದಾಳೆ. ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಮಹಿಳೆಯರೂ ಕೂಡಾ ಪಾಲ್ಗೊಳ್ಳಬಹುದು ಎಂದು ಆಕೆ ಸಾಧಿಸಿ ತೋರಿಸಿದ್ದಾಳೆ. ಚೈತ್ರಾ ಕುಂದಾಪುರದ ಬೊಳ್ಳಂಪಳ್ಳಿ ಗ್ರಾಮದ ಕಾಲ್ತೋಡು ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ....
ಹೆಚ್ಚಿನ ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 2019-20 ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ್ಯಕ್ರಮ-ಕಹಳೆ ನ್ಯೂಸ್

ಕಲ್ಲಡ್ಕ : ಮಾರ್ಚ್ 2 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 2019-20 ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರಧಾನ ಕಾರ್ಯಕ್ರಮ ನಡೆಸಲಾಯಿತು. ಭಾರತ ಸನಾತನ ದೇಶ, ಈಗ ನಾಯಕನಾಗಿ ಭಾರತ ಎದ್ದು ನಿಂತಿದೆ, ಈ ಶಾಲೆಯಲ್ಲಿ ಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆ ತನ್ನ ಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆ. ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ...
ಹೆಚ್ಚಿನ ಸುದ್ದಿ

ಕೇರಳದಲ್ಲಿ ಬಿಜೆಪಿ ಗೆದ್ದರೆ ಒಳ್ಳೆಯ ಗುಣಮಟ್ಟದ ‘ಗೋ ಮಾಂಸ’…; ಬಿಜೆಪಿ ಮುಖಂಡನ ಭರವಸೆಗೆ ಬಿಜೆಪಿಗರೇ ತಬ್ಬಿಬ್ಬು…!-ಕಹಳೆ ನ್ಯೂಸ್

ಕೇರಳ : ಬಿಜೆಪಿ ಮುಖಂಡ ಎನ್. ಶ್ರೀಪ್ರಕಾಶ್, ಕೇರಳದಲ್ಲಿ ಬಿಜೆಪಿ ಗೆದ್ದರೆ ಒಳ್ಳೆ ಗುಣಮಟ್ಟದ ‘ಗೋ ಮಾಂಸ’ ಕೊಡುವ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು ಒಂದೆಡೆ ಕೇರಳ ವಿಧಾನಸಭಾ ಚುನಾವಣೆ ಗರಿಗೆದರಿದೆ. ಮತ್ತೊಂದೆಡೆ ಬಿಜೆಪಿ ಗೋ ಮಾಂಸ ನಿಷೇಧ ಮಾಡ್ತಾ ಇದೆ. ಆದ್ರೆ ಕೇರಳದ ಬಿಜೆಪಿ ಮುಖಂಡ ಈ ಭಾರೀ ಕೇರಳದಲ್ಲಿ ಬಿಜೆಪಿಯನ್ನ ಗೆಲ್ಲಿಸಿದ್ದಲ್ಲಿ ಗೋ ಮಾಂಸವನ್ನ ಕೊಡುವ ಭರವಸೆ ನೀಡುವ ಮೂಲಕ ಎಡವಟ್ಟು ಮಾಡುವುದರ ಜೊತೆಗೆ ಬಿಜೆಪಿಗೂ...
1 86 87 88 89 90 174
Page 88 of 174