Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕೋವಿಡ್ ನಿಂದಾಗಿ ನೀಟ್ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14ರಂದು ಪರೀಕ್ಷೆ ನಡೆಸಲು ‘ಸುಪ್ರೀಂ’ ಅನುಮತಿ!-ಕಹಳೆ ನ್ಯೂಸ್

ನವದೆಹಲಿ : ಕೊರೋನಾ ಸೋಂಕಿನಿಂದ ಸೆಪ್ಟೆಂಬರ್ ನಲ್ಲಿ NEET ಪರೀಕ್ಷೆಗೆ ಹಾಜರಾಗದೇ ಪರೀಕ್ಷೆಗೆ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಕೊರೋನಾದಿಂದ ಸಿಇಟಿ ಪರೀಕ್ಷೆಗೆ ಹಾಜರಾಗದ ಅಥವಾ ಕಂಟೈನ್ಮೆಂಟ್ ವಲಯದಲ್ಲಿ ವಾಸಮಾಡುತ್ತಿರುವ ಕಾರಣ ಸೆಪ್ಟೆಂಬರ್ ನಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸಲು ಅಕ್ಟೋಬರ್ 14ರಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇಂದು ಈ ಕುರಿತಂತೆ ವಿದ್ಯಾರ್ಥಿಗಳು ಸಲ್ಲಿಸಲಾಗಿದ್ದಂತ ಅರ್ಜಿಯ...
ಹೆಚ್ಚಿನ ಸುದ್ದಿ

ಮುಖ್ಯಮಂತ್ರಿಗಳು ಮೋದಿಗಾಗಿ ಜನರ ಭವಿಷ್ಯ ಅಡವಿಡುತ್ತಿದ್ದಾರೆ :ರಾಹುಲ್ ಗಾಂಧಿ ವಾಗ್ದಾಳಿ – ಕಹಳೆ ನ್ಯೂಸ್

ನವದೆಹಲಿ, ಅಕ್ಟೋಬರ್ 12:ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿಗಾಗಿ ಜನರನ್ನು ಅಡವಿಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇಂದು ನಡೆಯುವ ಜಿಎಸ್‌ಟಿ ಸಭೆಗೂ ಮುನ್ನ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರವು ಶ್ರೀಮಂತರಿಗಾಗಿ ಕೆಲಸ ಮಾಡುತ್ತದೆ. ಅದರ ಜತೆ ಜತೆಯಲ್ಲೇ ಎಂಟು ಸಾವಿರ ಕೋಟಿ ವಿಮಾನವನ್ನೂ ಖರೀದಿಸಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕೇಂದ್ರ ಸರ್ಕಾರವು ರಾಜ್ಯಗಳಿಂದ ಜಿಎಸ್‌ಟಿ ರಾಜಸ್ವ ನೀಡುವ ಭರವಸೆ ನೀಡಿದ್ದರು....
ಹೆಚ್ಚಿನ ಸುದ್ದಿ

ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಖುಷ್ಬೂ ರಾಜೀನಾಮೆ! ಬಿಜೆಪಿ ಸೇರ್ಪಡೆ ಬಹುತೇಕ ಖಚಿತ-ಕಹಳೆ ನ್ಯೂಸ್

ಚೆನ್ನೈ: ಚಿತ್ರರಂಗದಿಂದ ರಾಜಕೀಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಖುಷ್ಬೂ ಲಭ್ಯರಿರಲಿಲ್ಲ. ಸಂಜೆ ವಿಮಾನ ನಿಲ್ದಾಣದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಲು ಖುಷ್ಬೂ ನಿರಾಕರಿಸಿದ್ದರು. ಇವರ ಜತೆಗೆ ತಮಿಳುನಾಡಿನ ಐಆರ್‌ಎಸ್ ಅಧಿಕಾರಿಯೊಬ್ಬರು ಮತ್ತು ಯೂಟ್ಯೂಬರ್ ಒಬ್ಬರು ಕೂಡಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ....
ಹೆಚ್ಚಿನ ಸುದ್ದಿ

ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ-ಕಹಳೆ ನ್ಯೂಸ್

ಬೆಂಗಳೂರಿನ ಆರ್.ಟಿ. ನಗರದ ನಿವಾಸದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರಾಜನ್(87) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಹಲವು ಭಾಷೆಗಳಿಗೆ ಅವರು ಸಂಗೀತ ನಿರ್ದೇಶನ ನೀಡಿದ್ದರು. 'ಗಂಧದ ಗುಡಿ', 'ಪರಸಂಗದ ಗೆಂಡೆತಿಮ್ಮ', 'ಬಯಲುದಾರಿ', 'ನಾ ನಿನ್ನ ಮರೆಯಲಾರೆ', 'ಹೊಂಬಿಸಿಲು', 'ಗಾಳಿಮಾತು', 'ಶ್ರೀನಿವಾಸ ಕಲ್ಯಾಣ', 'ಚಲಿಸುವ ಮೋಡಗಳು' ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದರು. 375 ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು ರಾಜನ್-ನಾಗೇಂದ್ರ ಎಂದೇ ಖ್ಯಾತವಾಗಿದ್ದ...
ಹೆಚ್ಚಿನ ಸುದ್ದಿ

ಆಸ್ತಿ ಕಾರ್ಡ್ ವಿತರಿಸುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ- ಕಹಳೆ ನ್ಯೂಸ್

ನವದೆಹಲಿ : ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ (SVAMITVA) ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಗ್ರಾಮೀಣ ಪರಿವರ್ತನೆಗೆ ಇದೊಂದು ಐತಿಹಾಸಿಕ ಪ್ರಯತ್ನ ಎಂದು ಪಿಎಂ ನರೇಂದ್ರ ಮೋದಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನ ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ಬಿಡುಗಡೆ ಬಳಿಕ, ಪಿಎಂ ಮೋದಿ ಅವರು ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸುಧಾರಿತ ತಂತ್ರಜ್ಞಾನ ಯೋಜನೆಯಡಿಯ...
ಹೆಚ್ಚಿನ ಸುದ್ದಿ

ಗರಿಷ್ಠ ಅಂಕ ನೀಡಿ ಪಾಸ್ ಮಾಡಲು ಆದೇಶ: ಫೇಲಾದವರಿಗೂ ಗುಡ್ ನ್ಯೂಸ್-ಕಹಳೆ ನ್ಯೂಸ್

ಬೆಂಗಳೂರು : ಪ್ರಥಮ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪದವಿ ಪೂರ್ವಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪಾಸ್ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಅ.20ರೊಳಗೆ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣಕ್ಕೆ ಬೇಕಾದ ಗರಿಷ್ಠ ಅಂಕ ನೀಡಿ ಮುಂದಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ....
ಹೆಚ್ಚಿನ ಸುದ್ದಿ

ಇನ್ಮುಂದೆ ‘ಮೂಗರ್ಜಿ’ಗಳಿಗೆ ಮಾನ್ಯತೆ ಇಲ್ಲ : ರಾಜ್ಯಸರ್ಕಾರದಿಂದ ‘ಅನಾಮಧೇಯ ಪತ್ರ’ಗಳನ್ನು ಪರಿಗಣಿಸದಂತೆ ಆದೇಶ-ಕಹಳೆ ನ್ಯೂಸ್

ಬೆಂಗಳೂರು : ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಅನಾಮಧೇಯ ಪತ್ರಗಳ ಮೂಲಕ ಆರೋಪ ಮಾಡುತ್ತಿದ್ದಂತ ಪತ್ರಗಳಿಗೆ, ಇದೀಗ ಸರ್ಕಾರ ಬ್ರೇಕ್ ಹಾಕಿದೆ. ಇನ್ಮುಂದೆ ಮೂಗರ್ಜಿಗಳಿಗೆ ಮಾನ್ಯತೆ ಇಲ್ಲ ಎಂಬುದಾಗಿ ಖಡಕ್ ಆದೇಶದಲ್ಲಿ ಸೂಚಿಸಿದೆ. ಈ ಮೂಲಕ ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸದಂತೆ ಸುತ್ತೋಲೆಯಲ್ಲಿ ಸೂಚಿಸಿದೆ. ಈ ಕುರಿತಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್...
ಹೆಚ್ಚಿನ ಸುದ್ದಿ

ಜನರಿಂದ ಐಡಿಯಾ ಕೇಳಿದ ಪ್ರಧಾನಿ ನರೇಂದ್ರ ಮೋದಿ- ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ಮೋದಿಯವರು ಈ ರೀತಿ ಕೆಲ್ಸ ಮಾಡ್ಬೋದು, ಆ ರೀತಿಯಲ್ಲಿಯೂ ಶ್ರಮಿಸ್ಬೋದು ಅಂತಾ ಅದೆಷ್ಟೊ ಮಂದಿ ಹೇಳ್ತಾ ಇರ್ತಾರೆ. ಅಂತಹವರಿಗೆ ಪ್ರಧಾನಿ ಮೋದಿಯವರೇ ಒಂದು ವೇದಿಕೆ ಕಲ್ಪಿಸಿದ್ದು, ನಿಮ್ಮ ಐಡಿಯಾಗಳನ್ನ ನೇರವಾಗಿ ನನಗೆ ತಿಳಿಸಿ ಎಂದಿದ್ದಾರೆ. ಹೌದು,ಪ್ರಧಾನಿ ನರೇಂದ್ರ ಮೋದಿ ಇದೀಗ ಜನರಿಂದ ಐಡಿಯಾ ಕೇಳಿದ್ದಾರೆ. 'ಮನ್​ ಕಿ ಬಾತ್​' ಮೂಲಕ ಆಗಾಗ ತಮ್ಮ ಮನದ ಅನಿಸಿಕೆಗಳನ್ನ ಹಂಚಿಕೊಳ್ಳುವ ಮೋದಿ, ಆ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಸಮಾಜದಲ್ಲಿ ಸಾಧನೆ...
1 163 164 165 166 167 174
Page 165 of 174