ಮನಾಲಿಯಲ್ಲಿ ಭಾರೀ ಹಿಮಪಾತ : 8 ಕಿಮೀ ಟ್ರಾಫಿಕ್ ಜಾಮ್, ರಸ್ತೆಯಲ್ಲೇ ನಿಂತ ಪ್ರವಾಸಿಗರು- ಕಹಳೆ ನ್ಯೂಸ್
ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನಾಲಿ, ಶಿಮ್ಲಾ, ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಒಂದು ಕಡೆ ಪ್ರವಾಸಿಗರು ಸಂಭ್ರಮಿಸುತ್ತಿದ್ದರೆ, ಇನ್ನೂ ಕೆಲವರು ವಾಪಸ್ ಊರುಗಳಿಗೆ ಮರಳಲು ರಸ್ತೆಗಳಿಲ್ಲದೇ ಪರದಾಡುತ್ತಿದ್ದಾರೆ. ಕುಲು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಕೋಥಿ ಮತ್ತು ಮನಾಲಿ ರಸ್ತೆಗಳು ವಾಹನಗಳಿಂದಲೇ ತುಂಬಿ ತುಳುಕುತ್ತಿವೆ. ಹಿಮಪಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ 8 ಕಿಮೀಗೂ ಅಧಿಕ ಉದ್ದಕ್ಕೂ ವಾಹನಗಳು ರಸ್ತೆಯಲ್ಲೇ ನಿಂತಿವೆ....







