Saturday, June 20, 2026

ಸುದ್ದಿ

ಉಡುಪಿಕಾಪುಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಿದ ಸಲ್ಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ- ಕಹಳೆ ನ್ಯೂಸ್

ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಆಗಿರುವ ಕರಾವಳಿಯ ಹೆಮ್ಮೆಯ ಪುತ್ರಿ ರಕ್ಷಿತಾ ಶೆಟ್ಟಿ ಅವರನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಸ್ವಗೃಹದಲ್ಲಿ ಇಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಶಾಸಕರು ಮಾತನಾಡಿ ಕುಮಾರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ರನ್ನರ್ ಅಪ್ ಆಗಿರುವುದು ಕಾಪು ಕ್ಷೇತ್ರಕ್ಕೆ ಹಾಗೂ ಕರಾವಳಿಗರಿಗೆ ಹೆಮ್ಮೆಯ ವಿಚಾರ ನಾನು ಅವರಿಗೆ ವಿಶೇಷವಾದ ಅಭಿನಂದನೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ – ಕಹಳೆ ನ್ಯೂಸ್

ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ತುಂಬೆ ವಲಯದ ನರಿಕೊಂಬು ಬಿ ಕಾರ್ಯಕ್ಷೇತ್ರದ ಜಯಕಿರಣ ಸ್ವಸಹಾಯ ಸಂಘದ ಸದಸ್ಯರಾದ ಶ್ರೀಮತಿ ವಿಜಯರವರ ಗಂಡ ಚಂದಪ್ಪ ಮೂಲ್ಯ ರವರ ಅನರೋಗ್ಯದ ನಿಮಿತ್ತ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುವ ತುರ್ತು ಸಹಾಯಧನ ಕ್ರಿಟಿಕಲ್ ಫಂಡ್ ರೂ 25000/- ವಿತರಿಸಲಾಯಿತು. ಈ ಸಂದರ್ಭದಲ್ಲಿ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ಒಕ್ಕೂಟ ಸೇವಾ ಪ್ರತಿನಿಧಿ ಪ್ರತಿಭಾ,...
ಉಡುಪಿಕಾರ್ಕಳಜಿಲ್ಲೆಸುದ್ದಿ

ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು- ಕಹಳೆ ನ್ಯೂಸ್

ಕಾರ್ಕಳ (ಉಡುಪಿ): ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಬಳಿಯ ರಾ‌ಷ್ಟ್ರೀಯ‌ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕ್ರೂಸರ್‌ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಕಲಬುರಗಿ ಕಡೆಯ ತೂಫಾನ್ ವಾಹನವು ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ಕಳ ಪೊಲೀಸರು‌ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ....
ಅಂತಾರಾಷ್ಟ್ರೀಯಆರೋಗ್ಯಸುದ್ದಿ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದ ಅಮೆರಿಕ- ಕಹಳೆ ನ್ಯೂಸ್

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದಿದೆ. ಡಬ್ಲ್ಯೂಹೆಚ್‌ಒನಲ್ಲಿ ತನ್ನ ಸದಸ್ಯತ್ವವನ್ನು ಅಮೆರಿಕ (America) ಅಧಿಕೃತವಾಗಿ ರದ್ದುಗೊಳಿಸಿದೆ. ಅಮೆರಿಕ ನಿರ್ಧಾರದ ಬಳಿಕ ಜಿನಿವಾದಲ್ಲಿರುವ WHO ಕಚೇರಿಯಲ್ಲಿ ಅಮೆರಿಕದ ಧ್ವಜ ತೆರವು ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ವಿಫಲವಾಗಿದೆ ಯುಎಸ್‌ ಆರೋಪಿಸಿತ್ತು. ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳಂತಹ ವಿಷಯಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ....
ಅಂತಾರಾಷ್ಟ್ರೀಯಚಿಕ್ಕಮಂಗಳೂರುಶುಭಾಶಯಸುದ್ದಿ

ಕಾಫಿನಾಡಲ್ಲೊಂದು ಕಡಲಾಚೆಯ ಪ್ರೇಮಕಥೆ : ಚಿಕ್ಕಮಗಳೂರಿನ ಯುವಕನಿಗೆ ಜೋಡಿಯಾದ ಚೀನಾ ಚೆಲುವೆ!- ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರೇಮ  ದೇಶ, ಭಾಷೆ, ಗಡಿ ಎಲ್ಲದ್ದನ್ನೂ ಮೀರಿದ್ದು.. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ  ಯುವತಿಯೊಬ್ಬಳು ಜೋಡಿಯಾಗಿದ್ದಾಳೆ. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವಕ ರೂಪಕ್ ಚೀನಾ ಮೂಲದ ಜೇಡ್, ಕುಟುಂಬಸ್ಥರ ಸಮ್ಮುಖದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ  ಮದುವೆಯಾಗಿದ್ದಾರೆ. ಯುವತಿಯ ತಂದೆ – ತಾಯಿಯೇ ಚೀನಾದಿಂದ ಮಗಳನ್ನು ಕರೆತಂದು, ಯುವಕನಿಗೆ ಧಾರೆ ಎರೆದಿದ್ದಾರೆ. ಈ ವೇಳೆ ಭಾರತ-ಚೀನಾ ಸಂಪ್ರದಾಯ ಎರಡು ಒಂದೇ ರೀತಿ...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು : ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ- ಕಹಳೆ ನ್ಯೂಸ್

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ 25 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ. ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್...
ಸುದ್ದಿ

ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ : ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ FIR – ಕಹಳೆ ನ್ಯೂಸ್

ಯಾದಗಿರಿ: ಶಿಕ್ಷಕರು ಬೈದಿದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಯಾದಗಿರಿ  ಜಿಲ್ಲೆಯ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪವನ್ (15) ಮೃತ ಬಾಲಕ. 9ನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ.   ಶಿಕ್ಷಕರು ಬೈದಿದ್ದಕ್ಕೆ ಮನನೊಂದು ಜ.21ರಂದು ಶಾಲೆ ಆವರಣದ ಹಿಂಭಾಗದಲ್ಲಿರುವ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಮಗನ...
ಸುದ್ದಿ

ಚಿನ್ನ ಪ್ರಿಯರಿಗೆ ಶಾಕ್;‌ 10 ಗ್ರಾಂ ಚಿನ್ನಕ್ಕೆ 5,400 ರೂ, ಕೆಜಿ ಬೆಳ್ಳಿಗೆ 15,000 ರೂ. ಏರಿಕೆ- ಕಹಳೆ ನ್ಯೂಸ್

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ  ಬೆಲೆಗಳು  ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ರಾಜಕೀಯ ಅನಿಶ್ಚಿತತೆ ಮತ್ತು ಡಾಲರ್ ದುರ್ಬಲಗೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿ ದರಗಳಲ್ಲಿ ಏರಿಳಿತ ಆಗುತ್ತಿದೆ. ಎರಡೂ ಲೋಹಗಳ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡಿದ್ದು, ಹೂಡಿಕೆದಾರರು ಸುರಕ್ಷಿತ ಸ್ವರ್ಗದ ಸ್ವತ್ತುಗಳತ್ತ ಮುಖ ಮಾಡಲು ಕಾರಣವಾಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 5,400 ರೂ. ಏರಿಕೆಯಾಗಿ 1,59,710 ರೂ.ಗೆ ತಲುಪಿದೆ. 22 ಕ್ಯಾರೆಟ್...
1 168 169 170 171 172 3,399
Page 170 of 3399