ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ “ಮಂಗಳೂರು ರಥೋತ್ಸವ’
ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ "ಮಂಗಳೂರು ರಥೋತ್ಸವ' (ಕೋಡಿಯಾಲ ತೇರು) ಸಹಸ್ರಾರು ಭಕ್ತರ ಸಮಕ್ಷಮ ರವಿವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಪ್ರಕ್ರಿಯಾದಿಗಳು ಬೆಳಗ್ಗೆಯೇ ಮಹಾಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡು ಶ್ರೀ ವೀರ ವೆಂಕಟೇಶ ಸಹಿತ ಪರಿವಾರ ದೇವರಿಗೆ ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ನೆರವೇರಿತು. ಯಜ್ಞಮಂಟಪದಲ್ಲಿ ಮಹಾ ಯಜ್ಞ, ಮಹಾ ಪೂರ್ಣಾಹುತಿ ನೆರವೇರಿದ ಬಳಿಕ ಶ್ರೀ ದೇವರು...







