Saturday, June 20, 2026

ಸುದ್ದಿ

ಉಡುಪಿಜಿಲ್ಲೆಸುದ್ದಿ

ಹಿರಿಯಡಕ: ಸ್ಕೂಟಿಗೆ ಡಿಕ್ಕಿಯಾದ ಇನ್ನೋವಾ ಕಾರು: ಪವಾಡಸದೃಶ ರೀತಿಯಲ್ಲಿ ಬದುಕುಳಿದ ಇಬ್ಬರು ಸವಾರರು ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ -ಕಹಳೆ ನ್ಯೂಸ್

ಉಡುಪಿ: ಅತೀ ವೇಗದಿಂದ ಬಂದ ಇನ್ನೋವಾ ಕಾರು ಚಾಲಕನೋರ್ವ ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಹಿರಿಯಡಕ ಪೇಟೆಯಲ್ಲಿ ಸಂಭವಿಸಿದೆ. ಇನ್ನೋವಾ ಕಾರು ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಸ್ಕೂಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪಲ್ಟಿಯಾಗಿ ಬಿದ್ದಿದ್ದಾನೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ವಿವೇಕಾನಂದ ಕಾಲೇಜಿನ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ‘ಕೊನೆಯವಳು’ ಎಂಬ ಕತೆ ಬಹುಮಾನಕ್ಕೆ ಆಯ್ಕೆ -ಕಹಳೆ ನ್ಯೂಸ್

ಪುತ್ತೂರು: ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ನೇಸರು ಜಾಗತಿಕ ಕತೆ ಸ್ಪರ್ಧೆಯಲ್ಲಿ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ 'ಕೊನೆಯವಳು' ಎಂಬ ಕತೆ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದೆ. ಮಾರ್ಚ್‌ನಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಭವ್ಯ ಪಿ.ಆರ್.ನಿಡ್ಪಳ್ಳಿ ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಅನೇಕ ಲೇಖನ, ಕತೆ, ಕವನಗಳು ವಿವಿಧ...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು : ಎಕರೆಗಟ್ಟಲೆ ಸೂಕ್ಷ್ಮ ಹುಲ್ಲುಗಾವಲು ಬೆಂಕಿಗಾಹುತಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸುಮಾರು ಒಂದೂವರೆ-ಎರಡು ಕಿ.ಮೀ. ಪಶ್ಚಿಮ ಘಟ್ಟಗಳ ತಪ್ಪಲಿನ ಅಪರೂಪದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಮೂಡಿಗೆರೆ ಅರಣ್ಯ ವಲಯದೊಳಗೆ ಕಾಣಿಸಿಕೊಂಡಿರುವ ಬೆಂಕಿಯಿಂದ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಕೂಡ ಹೆಚ್ಚಿರುವುದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹರಡಿದ್ದು ಅರಣ್ಯ ಸಂಪತ್ತಿಗೆ...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧ ದೇವಪ್ರಸಾದ್ ಗೆ ಭರ್ಜರಿ ಸ್ವಾಗತ -ಕಹಳೆ ನ್ಯೂಸ್

ಮೊಗ್ರು : ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು,ನಿವೃತ್ತ ಸೇನಾನಿಗಳ ಸಂಘ ಹಾಗೂ ಊರವರ ಸಹಕಾರದಲ್ಲಿ ಭಾರತ ಮಾತೆಯ ಸೇವೆಯಲ್ಲಿ 22 ವರ್ಷಗಳ ಕಾಲ ಧೈರ್ಯ, ತ್ಯಾಗ ಮತ್ತು ಗೌರವದ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದಿ ಫೆ 01 ರಂದು ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ವೀರ ಯೋಧ ಎ.ಸಿ.ಪಿ ಹವಾಲ್ದಾರ್...
ಬೆಂಗಳೂರುರಾಜ್ಯಸುದ್ದಿ

KPTCL ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯ ಸರ್ಕಾರದ ಆದೇಶದನ್ವಯ, ಅವರು ಪ್ರಸ್ತುತ ನಿರ್ವಹಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಅಧ್ಯಕ್ಷ ಸ್ಥಾನದ ಜೊತೆಗೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೆರವೇರಿಸಲಿದ್ದಾರೆ. ಈ ಹಿಂದೆ ಕೆಪಿಟಿಸಿಎಲ್ ವ್ಯವಸ್ಥಾಪಕ...
ಜಿಲ್ಲೆಸುದ್ದಿ

ಮೂರು ಮಕ್ಕಳನ್ನು ಕೊಲೆಗೈದು ವಿಷ ಸೇವಿಸಿದ ತಾಯಿ -ಕಹಳೆ ನ್ಯೂಸ್

ಬಾಗಲಕೋಟೆ: ತಾಯಿಯೊಬ್ಬಳು ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ರೂಪಾ ಹನುಮಂತ ಗೌಡರ (28) ಕೃತ್ಯ ಎಸಗಿದ ತಾಯಿ. ಸಮೃದ್ಧಿ ಹನುಮಂತಪ್ಪ ಗೌಡರ (5), ಪ್ರೀತಂ ಹನುಮಂತಪ್ಪ ಗೌಡರ (4), ಸುಕ್ಷೀತ ಹನುಮಂತಪ್ಪ ಗೌಡರ (2) ಮೃತ ಮಕ್ಕಳು. ಮೂವರು ಮಕ್ಕಳನ್ನು ಮನೆಯಲ್ಲಿಯೇ ನೇಣು ಹಾಕಿ ಸಾಯಿಸಿದ್ದಾಳೆ. ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ರೂಪಾ...
ಬೆಂಗಳೂರುರಾಜ್ಯಸುದ್ದಿ

ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಅನುಮಾನಾಸ್ಪದ ಸಾವು -ಕಹಳೆ ನ್ಯೂಸ್

ಬೆಂಗಳೂರು: ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ನಡೆದಿದೆ. ಇರ್ಫಾನ್ ಮುಲ್ಲಾನಿ (26) ಮೃತ ವ್ಯಕ್ತಿ. ಜನವರಿ 30ರಂದು ಘಟನೆ ನಡೆದಿದೆ. ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಇರ್ಫಾನ್ ಇದ್ದಕ್ಕಿದ್ದಂತೆ ನಾಲ್ಕನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಯಾರಾದರು ಮೇಲಿಂದ ತಳ್ಳಿದ್ರಾ ಅನ್ನೋ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಭಾರತಿನಗರ ಪೊಲೀಸರು...
ಸುದ್ದಿ

ಮ.ನ.ಪಾ ವ್ಯಾಪ್ತಿಯ 48ನೇ ಕಂಕನಾಡಿ ವೆಲೆನ್ಸಿಯಾ ವಾರ್ಡಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ನಾಗುರಿ-ಮಜಾಲು ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್- ಕಹಳೆ ನ್ಯೂಸ್

ಮ.ನ.ಪಾ ವ್ಯಾಪ್ತಿಯ 48ನೇ ಕಂಕನಾಡಿ ವೆಲೆನ್ಸಿಯಾ ವಾರ್ಡಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ನಾಗುರಿ-ಮಜಾಲು ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಈ ಹಿಂದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1ರಲ್ಲಿ ಈ ಕಾಮಗಾರಿಗೆ ಶಿಲನ್ಯಾಸವನ್ನು ನೆರವೇರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಕೂಡಲೇ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರಕ್ಕೆ ನೀಡಲಾಗಿದ್ದ ಸುಮಾರು 65 ಕೋಟಿ...
1 157 158 159 160 161 3,399
Page 159 of 3399