Friday, April 24, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ವಿವೇಕಾನಂದ ಕಾಲೇಜಿನ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ‘ಕೊನೆಯವಳು’ ಎಂಬ ಕತೆ ಬಹುಮಾನಕ್ಕೆ ಆಯ್ಕೆ -ಕಹಳೆ ನ್ಯೂಸ್

ಪುತ್ತೂರು: ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ನೇಸರು ಜಾಗತಿಕ ಕತೆ ಸ್ಪರ್ಧೆಯಲ್ಲಿ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ‘ಕೊನೆಯವಳು’ ಎಂಬ ಕತೆ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಮಾರ್ಚ್‌ನಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭವ್ಯ ಪಿ.ಆರ್.ನಿಡ್ಪಳ್ಳಿ ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಅನೇಕ ಲೇಖನ, ಕತೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ ಹಾಗೂ ಆಕಾಶವಾಣಿ ಮಂಗಳೂರಿನಲ್ಲಿ ಭಿತ್ತರಗೊಂಡಿವೆ. ಇವರು ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ಮಂಜೊಟ್ಟಿ ಅವರ ಪತ್ನಿ.