Friday, April 24, 2026
ಬೆಂಗಳೂರುರಾಜ್ಯಸುದ್ದಿ

ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಅನುಮಾನಾಸ್ಪದ ಸಾವು -ಕಹಳೆ ನ್ಯೂಸ್

ಬೆಂಗಳೂರು: ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ನಡೆದಿದೆ.

ಇರ್ಫಾನ್ ಮುಲ್ಲಾನಿ (26) ಮೃತ ವ್ಯಕ್ತಿ. ಜನವರಿ 30ರಂದು ಘಟನೆ ನಡೆದಿದೆ. ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಇರ್ಫಾನ್ ಇದ್ದಕ್ಕಿದ್ದಂತೆ ನಾಲ್ಕನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಾರಾದರು ಮೇಲಿಂದ ತಳ್ಳಿದ್ರಾ ಅನ್ನೋ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಭಾರತಿನಗರ ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದಾರೆ.