Friday, April 24, 2026

ಸುದ್ದಿ

ಜಿಲ್ಲೆಸುದ್ದಿ

ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ :ನೇಣಿಗೆ ಶರಣಾದ ಯುವಕ -ಕಹಳೆ ನ್ಯೂಸ್

ಕಾರವಾರ: ಷೇರು ಮಾರುಕಟ್ಟೆಯಲ್ಲಿ   ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ   ನಡೆದಿದೆ. ನಗರದ ನಿವಾಸಿ ಹರ್ಷವರ್ಧನ್ (22) ನೇಣಿಗೆ ಶರಣಾದ ಯುವಕ. ಈತ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ. ಹೀಗೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಮನೆಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಹರ್ಷವರ್ಧನ್ ತಂದೆ...
ಜಿಲ್ಲೆಸುದ್ದಿಹಾಸನ

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ : ಗಾರ್ಡ್‌ ಸ್ಥಿತಿ ಗಂಭೀರ  -ಕಹಳೆ ನ್ಯೂಸ್

ಹಾಸನ: ಮೂವರು ಇಟಿಎಫ್  ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಾಸ್ಟೆಲ್ ಹಿಂಭಾಗ ಕಾಡಾನೆ ದಾಳಿ ನಡೆಸಿದೆ. ದಾಳಿಯಲ್ಲಿ ಗಾಯಗೊಂಡ ಗಾರ್ಡ್ ರಮೇಶ್ ಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿ ವಿಶ್ವ ಹಾಗೂ ಜೀವನ್‌ ಅವರು ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕಾಡಾನೆಗಳ ಹೆಜ್ಜೆ ಗುರುತು ನೋಡಿಕೊಂಡು, ಚಲನವಲನ ಗಮನಿಸುತ್ತ ರಮೇಶ್, ವಿಶ್ವ ಹಾಗೂ ಜೀವನ್ ತೆರಳುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ....
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂಸ್ಕೃತ ಭಾರತೀ ಹಾಗೂ ದೇವಾಲಯ ಸಂವರ್ಧನ ಸಮಿತಿ ವತಿಯಿಂದ ಲಯನ್ಸ್ ಕ್ಲಬ್ ಸಹಕಾರದೊಂದಿಗೆ 10 ದಿನಗಳ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ -ಕಹಳೆ ನ್ಯೂಸ್

ಪುತ್ತೂರು : ಪ್ರಾಚೀನವೂ ಪ್ರಸಿದ್ಧವು ಆದ ಸಂಸ್ಕೃತ ಭಾಷೆಯನ್ನು ಸಂಭಾಷಣೆಯ ಮೂಲಕ ಕಲಿಯುವ ಪ್ರಯತ್ನವಾಗಿ "ಸಂಸ್ಕೃತ ಭಾರತೀ" ಎಂಬ ಅಖಿಲ ಭಾರತ ವ್ಯಾಪ್ತಿಯುಳ್ಳ ಸಂಸ್ಥೆಯು ಪುತ್ತೂರಿನಲ್ಲಿ "ದೇವಾಲಯ ಸಂವರ್ಧನಾ ಸಮಿತಿ" ಒಡಗೂಡಿ ಶಿಬಿರ ವನ್ನು ಆಯೋಜಿಸಿದೆ.ಇದು ಪುತ್ತೂರಿನ ಬೊಳುವಾರಿನಲ್ಲಿರುವ ನವನೀತಂ ಸಭಾಂಗಣ ದಲ್ಲಿ ಏಪ್ರಿಲ್ 13 ರಿಂದ ಆರಂಭಗೊಂಡು ಎಪ್ರಿಲ್ 23 ಕ್ಕೆ ಕೊನೆಗೊಂಡಿದೆ. ಸಂಪೂರ್ಣ ಉಚಿತವಾದ ಈ ಶಿಬಿರದಲ್ಲಿ 10 ದಿನಗಳಲ್ಲಿ ಸಂಸ್ಕೃತದಲ್ಲೇ ಪದಗಳನ್ನು ಜೋಡಿಸುತ್ತಾ, ವಾಕ್ಯ ರಚಿಸಿ...
ಜಿಲ್ಲೆತುಮಕೂರುಸುದ್ದಿ

ತುಮಕೂರಿನಲ್ಲಿ 32 ನವಿಲುಗಳ ಸಾವು : ಹೀಟ್‌ಸ್ಟ್ರೋಕ್ ಶಂಕೆ – ಕಹಳೆ ನ್ಯೂಸ್

ತುಮಕೂರು: ಜಿಲ್ಲೆಯ ವಿವಿಧ ಭಾಗದಲ್ಲಿ 32 ನವಿಲುಗಳ ಸಾವನ್ನಪ್ಪಿದ್ದು, ಹೀಟ್‌ಸ್ಟ್ರೋಕ್‌ನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು  ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಏ.16ರಿಂದ 21ರವರೆಗೆ ಒಟ್ಟು 32 ನವಿಲುಗಳ ಸಾವನ್ನಪ್ಪಿವೆ. ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಶಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವರದಿ ಬಂದ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ....
ಜಿಲ್ಲೆಬಳ್ಳಾರಿಸುದ್ದಿ

ಏಕಾಏಕಿ 2 ಸಿಲಿಂಡರ್ ಬ್ಲಾಸ್ಟ್ :ಹೊತ್ತಿ ಉರಿದ ಹೋಟೆಲ್, ಬಾಲಕನಿಗೆ ಗಂಭೀರ ಗಾಯ -ಕಹಳೆ ನ್ಯೂಸ್

ಬಳ್ಳಾರಿ: ಹೋಟೆಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್  ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ಬಳ್ಳಾರಿ  ಜಿಲ್ಲೆಯ ಸಿರಗುಪ್ಪ  ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ. ತೆಕ್ಕಲಕೋಟೆಯ ಈರಣ್ಣ ಎನ್ನುವವರಿಗೆ ಸೇರಿದ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ ಈರಣ್ಣನ ಕುಟುಂಬಸ್ಥರು 9 ಜನ ಮಲಗಿದ್ದರು ಎನ್ನಲಾಗಿದೆ. 9 ಜನರ ಪೈಕಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 10 ವರ್ಷದ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿವೆ....
ಬೆಂಗಳೂರುರಾಜ್ಯಸುದ್ದಿ

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ -ಕಹಳೆ ನ್ಯೂಸ್

ಬೆಂಗಳೂರು: ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1ರ ಫಲಿತಾಂಶ ಪ್ರಕಟಗೊಳ್ಳಲಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಲಿದ್ದಾರೆ. ಸಚಿವರ ಸುದ್ದಿಗೋಷ್ಠಿ ಬಳಿಕ ಇಲಾಖೆ ವೆಬ್ ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್ ಬದಲಾಗಿ ಅಂಕ ನೀಡಲಾಗಿದೆ. 525 ಬದಲಿಗೆ 625 ಅಂಕಕ್ಕೆ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲಿದೆ. ಈ ಮೊದಲು ತೃತೀಯ ಭಾಷೆಗೆ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ತಣ್ಣೀರುಬಾವಿ ಸುಲಿಗೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ -ಕಹಳೆ ನ್ಯೂಸ್

ಮಂಗಳೂರು : ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ...
ದೆಹಲಿಸುದ್ದಿ

ಹಿರಿಯ ಕಂದಾಯ ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ – ಮನೆಗೆಲಸದವನ ಮೇಲೆ ಶಂಕೆ – ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಹಿರಿಯ ಕಂದಾಯ ಅಧಿಕಾರಿಯೊಬ್ಬರ (Indian Revenue Service) 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ. ಆಗ್ನೇಯ ದೆಹಲಿಯ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಈ ಕೊಲೆ ನಡೆದಿದೆ. ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಹತ್ಯೆಗೆ ಮೊಬೈಲ್‌ ಫೋನ್‌ ಚಾರ್ಜರ್‌ ಕೇಬಲ್‌ ಬಳಕೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಯಾದ ಯುವತಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ...
1 2 3 3,334
Page 1 of 3334