ಭಾರತದ ಪ್ರಥಮ ಸ್ಥಳೀಯ ಹೈಡ್ರೋಜನ್ ಹಡಗು ಲೋಕಾರ್ಪಣೆ – ಕಹಳೆ ನ್ಯೂಸ್
ವಾರಾಣಸಿ (ಉತ್ತರ ಪ್ರದೇಶ): ಭಾರತದ ಮೊದಲ ಸ್ಥಳೀಯ ಹೈಡ್ರೋಜನ್ ಇಂಧನ ಕೋಶ ಹಡಗನ್ನು ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನವಾಲ್ ಅವರು ವಾರಾಣಸಿಯ ನಮೋ ಘಾಟ್ನಲ್ಲಿ ಗುರುವಾರ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಇದು ಕೇವಲ ತಾಂತ್ರಿಕ ಪ್ರಗತಿಯಲ್ಲ. ಹಸಿರು ಇಂಧನ ಮತ್ತು ಸ್ವದೇಶಿ ಪರಿಹಾರಗಳತ್ತ ನಮ್ಮ ವಿಶ್ವಾಸದ ಹೆಜ್ಜೆ ಇದಾಗಿದೆ. ಹೈಡ್ರೋಜನ್ ಚಾಲಿತ ಹಡಗುಗಳನ್ನು ನಿರ್ವಹಿಸುವ ಚೀನಾ, ನಾರ್ವೆ, ನೆದರ್ಲ್ಯಾಂಡ್ಸ್, ಜಪಾನ್ನಂತಹ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದ್ದು ರಾಷ್ಟ್ರೀಯ...







