ಇರಾನ್ಗೆ ಬಿಗ್ ಶಾಕ್ ಕೊಟ್ಟ ಅಮೆರಿಕ-ಇಸ್ರೇಲ್; ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ -ಕಹಳೆ ನ್ಯೂಸ್
ಟೆಹ್ರಾನ್: ಇರಾನ್ಗೆ (Iran) ಅಮೆರಿಕ ಮತ್ತು ಇಸ್ರೇಲ್ ಬಿಗ್ ಶಾಕ್ ಕೊಟ್ಟಿವೆ. ಇರಾನ್ನ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ ನಡೆಸಿವೆ. ದಕ್ಷಿಣ ಟೆಹ್ರಾನ್ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಆದರೆ, ಹತ್ತಿರದ ಸಂಸ್ಕರಣಾಗಾರಕ್ಕೆ ಯಾವುದೇ ಹಾನಿಯಾಗಿಲ್ಲ. ಈ ದಾಳಿಗಳು ನಗರದಾದ್ಯಂತ ಬೆಂಕಿ ಮತ್ತು ಹೊಗೆಯನ್ನು ಹರಡಿದೆ. ಅಲ್ಬೋರ್ಜ್ ಪ್ರಾಂತ್ಯದ ಕರಾಜ್ ನಗರದಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬಂದಿದೆ. ದಾಳಿಯನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ. ಇರಾನ್ ಇನ್ಮುಂದೆ ಮಧ್ಯಪ್ರಾಚ್ಯದ...







