Friday, June 19, 2026

ರಾಜ್ಯ

ಜಿಲ್ಲೆರಾಜ್ಯಸುದ್ದಿ

ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯದ ಜನತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸಂದೇಶ -ಕಹಳೆ ನ್ಯೂಸ್

ನಾಡಿನ ಸಮಸ್ತ ತಾಯಂದಿರು, ಅಕ್ಕ-ತಂಗಿಯರು ಮತ್ತು ಹೆಣ್ಣುಮಕ್ಕಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹೃತ್ಪೂರ್ವಕ ಶುಭಾಶಯಗಳು. ಮಹಿಳೆ ಎಂದರೆ ಕೇವಲ ಒಂದು ಕುಟುಂಬದ ಭಾಗವಲ್ಲ; ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ ಮತ್ತು ಭವಿಷ್ಯದ ನಿರ್ಮಾತೃ. ಮಹಿಳೆಯರು ಶಿಕ್ಷಣ, ಉದ್ಯೋಗ, ವಿಜ್ಞಾನ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಯ ಹೊಸ ಅಧ್ಯಾಯಗಳನ್ನು ಬರೆಯುತ್ತಿರುವ ಈ ಕಾಲಘಟ್ಟದಲ್ಲಿ ನಾವು ಅವರ ಸಾಧನೆಗಳನ್ನು ಗೌರವಿಸುವುದೂ, ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸುವುದೂ ಅತ್ಯಂತ ಮುಖ್ಯವಾಗಿದೆ. ನಮ್ಮ ಸಮಾಜದ ಇತಿಹಾಸವನ್ನು...
ದೆಹಲಿರಾಜ್ಯಸುದ್ದಿ

ದೇಶದಲ್ಲಿ 250 ಮಿಲಿಯನ್ ಬ್ಯಾರಲ್‌ಗೂ ಹೆಚ್ಚು ಕಚ್ಚಾ ತೈಲ ಸಂಗ್ರಹ – ಇಂಧನ ಬಿಕ್ಕಟ್ಟು ವದಂತಿ ತಳ್ಳಿ ಹಾಕಿದ ಕೇಂದ್ರ -ಕಹಳೆ ನ್ಯೂಸ್

ನವದೆಹಲಿ: ಇಸ್ರೇಲ್‌, ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷದಿಂದ ದೇಶದಲ್ಲಿ ಇಂಧನ ಅಭಾವ ಉಂಟಾಗಿದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಪೆಟ್ರೋಲ್ ಡಿಸೇಲ್ ಅಭಾವ, ದರ ಏರಿಕೆ ಬಗ್ಗೆ ವದಂತಿ ಬೇಡ. ಇಂಧನ ಅಭದ್ರತೆ ವದಂತಿಗಳನ್ನು ನಂಬಬೇಡಿ. ಭಾರತದಲ್ಲಿ 250+ ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹವಿದೆ. ಸುಮಾರು 50 ದಿನಗಳ ಪೂರೈಕೆಗೆ ಸನ್ನದ್ಧವಾಗಿದೆ. ಇಂಧನ ಅಭಾವ, ಬಿಕ್ಕಟ್ಟು ಎದುರಾಗುವುದಿಲ್ಲ ಈ ಬಗ್ಗೆ ಆತಂಕ ಬೇಡ ಎಂದು...
ದೆಹಲಿರಾಜ್ಯಸುದ್ದಿ

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 60 ರೂ. ಏರಿಕೆ – ಕಹಳೆ ನ್ಯೂಸ್

ನವದೆಹಲಿ: ನಿರೀಕ್ಷೆಯಂತೆ ಕೊಲ್ಲಿ ಯುದ್ಧದ ಬಿಸಿ ನಮ್ಮ ಮನೆ ಬಾಗಿಲಿಗೆ ತಟ್ಟಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ 60 ರೂ. ಏರಿಕೆಯಾದರೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ದರ 115 ರೂ. ಏರಿಕೆಯಾಗಿದೆ. ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್‌, ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ. ಯಾವ ನಗರದಲ್ಲಿ ಎಷ್ಟು? ದರ ಏರಿಕೆಗೂ ಮೊದಲು...
ದೆಹಲಿರಾಜ್ಯಸುದ್ದಿ

ದೇನಾ ಮುಳುಗುವ ಮೊದಲೇ ಇರಾನಿನ ಮತ್ತೊಂದು ನೌಕಾ ಹಡಗಿಗೆ ಆಶ್ರಯ ನೀಡಿತ್ತು ಭಾರತ -ಕಹಳೆ ನ್ಯೂಸ್

ನವದೆಹಲಿ: ಇರಾನಿನ (Iran) ಯುದ್ಧ ನೌಕೆಯನ್ನು ಅಮೆರಿಕ ಮುಳುಗಿಸಿದ ಬೆನ್ನಲ್ಲೇ ಭಾರತ ಇರಾನಿನ ಹಡಗನ್ನು ಕೊಚ್ಚಿಯಲ್ಲಿ ತುರ್ತಾಗಿ ನಿಲ್ಲಿಸಲು ಅನುಮತಿ ನೀಡಿದ ವಿಚಾರ ಬೆಳಕಿಗೆ ಬಂದಿದೆ. ಇರಾನ್ ಯುದ್ಧನೌಕೆ IRIS ದೇನಾವನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸುವ ಕೆಲವು ದಿನಗಳ ಮೊದಲು IRIS Lavan ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತು. ಇರಾನಿನ ವಿನಂತಿಯನ್ನು ಸ್ವೀಕರಿಸಿದ ಭಾರತ ಕೊಚ್ಚಿಯಲ್ಲಿ ನಿಲ್ಲಿಸಲು ಅನುಮತಿ ನೀಡಿದೆ. ಹಡಗಿನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದರಿಂದ ಐಆರ್‌ಐಎಸ್‌...
ಕ್ರೀಡೆಮುಂಬೈರಾಜ್ಯಸುದ್ದಿ

ಸಂಜು ಬ್ಯಾಟಿಂಗ್‌, ಬುಮ್ರಾ ಬೌಲಿಂಗ್‌, ಅಕ್ಷರ್‌ ಸ್ಟನ್ನಿಂಗ್‌ ಕ್ಯಾಚ್‌ ; 7 ರನ್‌ಗಳ ರೋಚಕ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ – ಕಹಳೆ ನ್ಯೂಸ್

ಮುಂಬೈ: ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್‌ ಪಟೇಲ್‌ ಸ್ಟನ್ನಿಂಗ್‌ ಕ್ಯಾಚ್‌, ಕೊನೆಯಲ್ಲಿ ಬುಮ್ರಾ ಬೌಲಿಂಗ್‌ ಕಮಾಲ್‌ನಿಂದ ಇಂಗ್ಲೆಂಡ್‌ ವಿರುದ್ಧ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ನಾಲ್ಕನೇ ಬಾರಿ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಬೆಥೆಲ್‌ ಸ್ಫೋಟಕ ಶತಕ ಸಿಡಿಸಿಯೂ 7 ವಿಕೆಟ್‌ ನಷ್ಟಕ್ಕೆ...
ದೆಹಲಿರಾಜ್ಯಸುದ್ದಿ

ಶ್ರೀಲಂಕಾ ಬಳಿ ಮುಳುಗಿ ಸಂಕಷ್ಟದಲ್ಲಿದ್ದ ಇರಾನ್‌ ನೌಕೆಗೆ ಭಾರತದ ನೌಕಾಪಡೆ ಸಹಾಯ -ಕಹಳೆ ನ್ಯೂಸ್

ನವದೆಹಲಿ: ಅಮೆರಿಕ (US) ದಾಳಿಯಿಂದ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನಿನ ಯುದ್ಧನೌಕೆಗೆ ಸಹಾಯಕ್ಕೆ ಭಾರತೀಯ ನೌಕಾಪಡೆ ಧಾವಿಸಿದೆ. ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ ದಾಳಿಗೆ ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಐರಿಸ್ ದೇನಾದಿಂದ ಬಂದ ಸಂಕಷ್ಟದ ಸಂಕೇತವನ್ನು ಅನುಸರಿಸಿ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮಾರ್ಚ್ 4 ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರ (MRCC)ಕ್ಕೆ IRIS ದೇನಾದಿಂದ ಸಂಕಷ್ಟದ ಕರೆ ಬಂದಿತು...
ದೆಹಲಿರಾಜ್ಯಸುದ್ದಿ

ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ -ಕಹಳೆ ನ್ಯೂಸ್

ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿದೆ. ಇದರಿಂದ ಭಾರತದ ನಿರ್ಣಾಯಕ ಇಂಧನ ಪೂರೈಕೆಗೆ ತಾತ್ಕಾಲಿಕ ಉತ್ತೇಜನ ಸಿಕ್ಕಂತಾಗಿದೆ. 2026ರ ಮಾ.5 ರಂದು ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾದ ಒಕ್ಕೂಟ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಅಧಿಕಾರ ನೀಡುವ ರಷ್ಯಾ ಸಂಬಂಧಿತ ಪರವಾನಗಿಯನ್ನು ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ನೀಡಿದೆ....
ಜಿಲ್ಲೆದೆಹಲಿರಾಜ್ಯಸುದ್ದಿ

ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷಗಳು ಪರಿಹಾರವಲ್ಲ: ಮೋದಿ – ಕಹಳೆ ನ್ಯೂಸ್

ನವದೆಹಲಿ: ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷಗಳು ಪರಿಹಾರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಮಿಲಿಟರಿ ಕಾರ್ಯಾಚರಣೆಗಳ ಬದಲಿಗೆ ರಾಜತಾಂತ್ರಿಕತೆಯ ಮೂಲಕ ಸಂಘರ್ಷಗಳನ್ನು ಪರಿಹರಿಸಬೇಕು ಎಂದರು. ಭಾರತ ಮತ್ತು ಫಿನ್ಲ್ಯಾಂಡ್ ಎರಡೂ ಮಿಲಿಟರಿ ಸಂಘರ್ಷದ ಮೂಲಕ ಮಾತ್ರ ಯಾವುದೇ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ ಎನ್ನುವುದನ್ನು ಒಪ್ಪುತ್ತೇವೆ. ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾವಾಗಲಿ ಸಂಘರ್ಷ ತ್ವರಿತ ಅಂತ್ಯಕ್ಕಾಗಿ ನಾವು...
1 29 30 31 32 33 301
Page 31 of 301