Recent Posts

Saturday, April 25, 2026

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ: ಪರಮೇಶ್ವರ್‌ – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರದ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಮಾಡಿದ್ದೇವೆ. ನಮಗೆ ನಮ್ಮ ಪಾಲಿನ ಜಿಎಸ್‌ಟಿ (GST) ಹಣ ಕೊಡುವುದು ಮತ್ತು ನಮಗೆ ಕೇಂದ್ರದಿಂದ ವಿಶೇಷ ಅನುದಾನ ಭದ್ರ ಮೇಲ್ದಂಡೆಗೆ ಕೊಟ್ಟಿದ್ದರು ಅದು ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮಗೆ ಬರುವ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಹಣ ಬಿಡುಗಡೆ ಆಗಿಲ್ಲ. ಅವೆಲ್ಲಾ ನಮಗೆ ಬರಬಹುದು ಎಂಬ ನಿರೀಕ್ಷೆ...
ಕೃಷಿದೆಹಲಿರಾಜಕೀಯರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ರೈತರಿಗೆ AI ಸಹಕಾರಿ; ‘ಭಾರತ್‌ ವಿಸ್ತಾರ್‌’ ಘೋಷಿಸಿದ ನಿರ್ಮಲಾ ಸೀತಾರಾಮನ್‌ – ಕಹಳೆ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ತಮ್ಮ ಬಜೆಟ್ ಭಾಷಣದಲ್ಲಿ ಕೃಷಿಯನ್ನು ಸುಲಭ ಮತ್ತು ಹೆಚ್ಚು ಸಂಘಟಿತವಾಗಿಸಲು ವಿನ್ಯಾಸಗೊಳಿಸಲಾದ ಹೊಸ AI ಆಧಾರಿತ ಸಾಧನ ‘ಭಾರತ್ ವಿಸ್ತಾರ್’ ಅನ್ನು ಘೋಷಿಸಿದ್ದಾರೆ. ‘ಭಾರತ್ ವಿಸ್ತಾರ್’ ಕೃಷಿ ಸಂಪನ್ಮೂಲಗಳನ್ನು ಪ್ರವೇಶಿಸಲು ವಾಸ್ತವಿಕ ಸಂಯೋಜಿತ ವ್ಯವಸ್ಥೆ. ಕೃಷಿ-ಸ್ಟಾಕ್ ಪೋರ್ಟಲ್‌ಗಳು ಮತ್ತು ಕೃಷಿ ಪದ್ಧತಿಗಳ ಕುರಿತು ICAR ಪ್ಯಾಕೇಜ್ ಅನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬಹುಭಾಷಾ AI ಸಾಧನವಾದ ಭಾರತ್ ವಿಸ್ತಾರ್ ಅನ್ನು ಪ್ರಾರಂಭಿಸಲಾಗುವುದು...
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ರೂ.57.93 ಲಕ್ಷ ಅನುದಾನ ಬಿಡುಗಡೆ : ಶಾಸಕ ಹರೀಶ್ ಪೂಂಜ- ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತುರ್ತು ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಗತ್ಯ ಅನುದಾನವನ್ನು ಒದಗಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಶಾಸಕರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಬೆಳ್ತಂಗಡಿ ತಾಲೂಕಿನ 14 ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡ ದುರಸ್ತಿ ಹಾಗೂ ಶೌಚಾಲಯಗಳ ಅಭಿವೃದ್ಧಿಗಾಗಿ ಒಟ್ಟು ರೂ.57.93 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಅನುದಾನದಿಂದ ಶಾಲೆಗಳ ಮೂಲಭೂತ...
ರಾಜ್ಯಸಂತಾಪಸುದ್ದಿ

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅಂತ್ಯಕ್ರಿಯೆ : ಅಂತಿಮ ದರ್ಶನಕ್ಕೆ ಜನಸ್ತೋಮ -ಕಹಳೆ ನ್ಯೂಸ್

ಮುಂಬೈ: ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ನಿಧನರಾದ ಡಿಸಿಎಂ ಅಜಿತ್ ಪವಾರ್ (Ajit Pawar) ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಮಹಾರಾಷ್ಟ್ರ ತನ್ನ ಪ್ರೀತಿಯ ‘ದಾದಾ’ನಿಗೆ ಬೆಳಗ್ಗೆ 11 ಗಂಟೆಗೆ ವಿದಾಯ ಹೇಳಲಿದೆ. ಡಿಸಿಎಂ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ಅವರ ರಾಜಕೀಯ ಭದ್ರಕೋಟೆಯಾದ ಬಾರಾಮತಿಯಲ್ಲಿ ನೆರವೇರಿಸಲಾಗುವುದು. ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಭಾಗವಹಿಸಲಿದ್ದಾರೆ. ಎನ್‌ಸಿಪಿ...
ಉಡುಪಿಕುಂದಾಪುರಜಿಲ್ಲೆಬೆಂಗಳೂರುರಾಜಕೀಯರಾಜ್ಯಸುದ್ದಿ

ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕ ಅಜಿತ್‌ ಪವಾರ್‌ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ -ಕಹಳೆ ನ್ಯೂಸ್

ಬೆಂಗಳೂರು: ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಜಿತ್‌ ಪವಾರ್‌, ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕರಾಗಿದ್ದರು. ಜನರ ಮಧ್ಯೆ ಇರುವ ನಾಯಕನಾಗಿ ಜನಾನುರಾಗಿ ಹೆಸರಾಗಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದರು. ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸಚಿವರು, ಮಹಾರಾಷ್ಟ್ರಕ್ಕೆ ಗಡಿ ಭಾಗದಲ್ಲಿರುವ ಕಾರಣ ಬೆಳಗಾವಿಯಲ್ಲಿ ಅಜಿತ್‌ ಪವಾರ್‌ ಅವರ ಅನುಯಾಯಿಗಳು ಸಾಕಷ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅಜಿತ್‌ ಪವಾರ್‌,...
ಮುಂಬೈರಾಜ್ಯಸಿನಿಮಾಸುದ್ದಿ

38ನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯನ ಪಯಣಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ -ಕಹಳೆ ನ್ಯೂಸ್

ಮುಂಬಯಿ:  ಬಾಲಿವುಡ್‌ ಚಿತ್ರರಂಗದ ಖ್ಯಾತ ಗಾಯಕ ಅರಿಜಿತ್ ಸಿಂಗ್  ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಫೇಮ್‌ - ನೇಮ್‌ ಕೊಟ್ಟಿದ್ದ  ಹಿನ್ನೆಲೆ ಗಾಯನ ಲೋಕಕ್ಕೆ ಅರಿಜಿತ್‌ ಸಿಂಗ್‌ ದಿಢೀರ್ ವಿದಾಯ ಹೇಳಿದ್ದಾರೆ. ಭಾರತೀಯ ಸಂಗೀತ ಉದ್ಯಮದಲ್ಲಿ ಪ್ರಮುಖ ಧ್ವನಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಅರಿಜಿತ್‌ ಸಿಂಗ್ ವೃತ್ತಪರ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 38 ವರ್ಷದ ಅರಿಜಿತ್ ಪೋಸ್ಟ್‌ ಹಂಚಿಕೊಂಡಿದ್ದಾರೆ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುರಾಜ್ಯಸಿನಿಮಾಸುದ್ದಿ

ಫೆ. 6ರಂದು ಕರಾವಳಿ ಜಿಲ್ಲೆಯಾದ್ಯಂತ “ನಾನ್ ವೆಜ್” ತುಳು ಚಲನಚಿತ್ರ ತೆರೆಗೆ -ಕಹಳೆ ನ್ಯೂಸ್

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ "ನಾನ್‌ವೆಜ್‌" ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದು ಈ ಚಿತ್ರದ ಒಂದು ಸಂದೇಶವೂ ಆಗಿದೆ. ಸು ಫ್ರಂ ಸೋ"...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಬಂಟ್ವಾಳರಾಜಕೀಯರಾಜ್ಯಸುದ್ದಿ

ಇ–ಸ್ವತ್ತು 2.0 ತಾಂತ್ರಿಕ ವೈಫಲ್ಯ: ಗ್ರಾಮೀಣ ಜನರಿಗೆ ತೀವ್ರ ಸಂಕಷ್ಟ – ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು -ಕಹಳೆ ನ್ಯೂಸ್

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು, ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ “ಜಾರಿಯಾದ ತಿಂಗಳಲ್ಲೇ ಕೈಕೊಟ್ಟ ಇ–ಸ್ವತ್ತು 2.0” ಎಂಬ ವರದಿಯನ್ನು ಉಲ್ಲೇಖಿಸಿ, ರಾಜ್ಯದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು. ಗ್ರಾಮೀಣ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪಡೆಯಲು ಸರ್ಕಾರವು ಡಿಸೆಂಬರ್ 01 ರಿಂದ ಇ–ಸ್ವತ್ತು...
1 14 15 16 17 18 280
Page 16 of 280