Friday, April 24, 2026

ಪ್ರಾದೇಶಿಕ

ಕಡಬಸುದ್ದಿ

ಬಡ ಮಕ್ಕಳಿಗೆ ಸಿಗುತಿಲ್ಲ ಆನ್ ಲೈನ್ ಶಿಕ್ಷಣ ! 5 ದಿನಗಳಿಂದ ‘ಚಂದನ ಪಾಠ’ ಕೂಡ ಇಲ್ಲ ಕಡಬದ ಈ ಅಣ್ಣಾ-ತಂಗಿಗೆ:-ಕಹಳೆ ನ್ಯೂಸ್

ಕೋವಿಡ್-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‍ಲೈನ್ ತರಗತಿಗಳು ಆರಂಭಗೊಂಡಿವೆ. ಆದ್ರೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿಯಾದ ವರುಣ್, ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆ, ಅನಾರೋಗ್ಯ ಪೀಡಿತ ತಂದೆಗೆ ಆಸರೆಯಾಗಬೇಕು ಅನ್ನೋ ಅಭಿಲಾಷೆಯನ್ನ ಇಟ್ಕೊಂಡಿದ್ದ. ಇನ್ನೂ ಈ ಬಾಲಕನ ತಾಯಿ ಬೀಡಿ ಕೆಲಸ ಮಾಡ್ತಾ ಇದ್ದು, ತಂಗಿ 8 ನೇ ತರಗತಿಯಲ್ಲಿ ಓದ್ತಾ ಇದ್ದಾಳೆ. ಬಡತನದಲ್ಲಿ ದಿನದೂಡ್ತ ಇರುವ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬಳ್ಳಿಯ ರೂಪದಲ್ಲಿ ನಾಗ ಪ್ರತ್ಯಕ್ಷ; ಜನರ ಕುತೂಹಲದ ಕೇಂದ್ರಬಿಂದುವಾದ ಬೆಳ್ತಂಗಡಿ ತಾಲೂಕಿನ ಬಳಂಜದ ಶಾಸ್ತಾರ  ದೇವಸ್ಥಾನದ ನಾಗನಕಟ್ಟೆ-ಕಹಳೆ ನ್ಯೂಸ್

ದಕ್ಷಿಣ ಕನ್ನಡ (ಜುಲೈ 24); ನಾಗರಪಂಚಮಿ ಹಬ್ಬ ಸಮೀಪಿಸುತ್ತಿದ್ದು ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲೊಂದು ಬಳ್ಳಿಯೊಂದು ನಾಗನ ರೂಪದಲ್ಲಿ ಹಡೆ ಎತ್ತಿ ನಿಂತಿರುವಂತೆ ಕಂಡು‌ಬಂದಿದೆ. ಬೆಳ್ತಂಗಡಿ ತಾಲೂಕಿನ ಬಳಂಜದ ಶಾಸ್ತಾರ ಬ್ರಹ್ಮಲಿಂಗೇಶದವರ ದೇವಸ್ಥಾನದಲ್ಲಿ ಆರಾಧಿಸಿಕೊಂಡು ಬರುತ್ತಿರುವ ನಾಗನ ಕಲ್ಲಿಗೆ ಈ ಬಳ್ಳಿ ಸುತ್ತುಹಾಕಿಕೊಂಡು ಬೆಳೆದಿದೆ. ನೋಡಲು ಸರ್ಪವೊಂದು ಹೆಡೆ ಎತ್ತಿ ನಿಂತಿರುವ ರೀತಿಯಲ್ಲಿ ಇಂದು ಕಂಡುಬರುತ್ತಿದ್ದು,ಬಳ್ಳಿಯ ಈ ವಿಶೇಷತೆಯನ್ನು ನೋಡಲು ಜನ ಇದೀಗ ಈ ನಾಗನ ಕಟ್ಟೆಗೆ ಬರಲಾರಂಭಿಸಿದ್ದಾರೆ. ಬುಡದಿಂದ...
ಸುಬ್ರಹ್ಮಣ್ಯ

ನಾಗರಪಂಚಮಿ ದಿನದಂದು ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತರಿಗೆ ಯಾವುದೇ ಸೇವೆಗಳು ಇಲ್ಲ: ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ-ಕಹಳೆ ನ್ಯೂಸ್

ಹಬ್ಬ ಹರಿದಿನಗಳಿಗು ಕೊರೊನಾವೈರಸ್ ಪರಿಣಾಮ ಜೋರಾಗಿಯೆ ತಟ್ಟಿದೆ. ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಅದರಲ್ಲೂ ನಾಗರಪಂಚಮಿ ದಿನದಂದು ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತರಿಗೆ ತೆರೆಯದಿರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಈ ಬಗ್ಗೆ ಆಡಳಿತ ಆಡಳಿತ ಮಂಡಳಿಯ ಪ್ರಕಟಣೆ ಭಕ್ತರಿಗೆ ನಿರಾಸೆ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಹಾಗೂ ದೇಶದಾದ್ಯಂತ ಭಕ್ತರ ದಂಡು ಹರಿದು ಬರುತ್ತಿತ್ತು. ಆದರೇ...
ಪುತ್ತೂರುಸುದ್ದಿ

ಅಕ್ರಮ ಗೋಸಾಗಟ, ಗೋ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಮನವಿ- ಕಹಳೆ ನ್ಯೂಸ್

ಪುತ್ತೂರು: ರಾಜ್ಯದಲ್ಲಿ ಕರ್ನಾಟಕ ಪ್ರಾಣಿಬಲಿ ನಿಷೇಧ ಕಾಯ್ದೆ 1959 (ತಿದ್ದುಪಡಿ 1975) ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಪ್ರಾಣಿಗಳನ್ನು ಯಾವುದೇ ಧರ್ಮದವರು ಬಲಿಕೊಡುವುದಕ್ಕೆ ನಿಷೇಧವಿದೆ. ಈ ರಾಜ್ಯದಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಜಾರಿಯಲ್ಲಿದ್ದು ಅದರ ಪ್ರಕಾರ ದನ,ಎಮ್ಮೆಗಳನ್ನು ಅಧಿಕೃತ ವಧಾಗೃಹದಲ್ಲಿ ಮಾತ್ರ ವಧಿಸಬಹುದಾಗಿದೆ 12 ವರ್ಷ ದಾಟಿದ ಎತ್ತು.ಕೋಣ.ದನ.ಎಮ್ಮೆಗಳನ್ನು ಅಧಿಕೃತ ವಧಾಗೃಹದಲ್ಲಿ ಮಾತ್ರ ವಧಿಸಬಹುದು ಇವುಗಳನ್ನು ಎಲ್ಲೆಂದರಲ್ಲಿ ಬಲಿ ಕೊಡುವುದಕ್ಕೆ.ವಧಿಸುವುದಕ್ಕೆ ನಿಷೇಧವಿದೆ. ಮುಂದಿನ...
ಬಂಟ್ವಾಳರಾಜ್ಯಸಂತಾಪ

ರಾಜ್ಯ ಧಾರ್ಮಿಕ ಪರಿಷತ್ತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಗೆ ಪಿತೃವಿಯೋಗ – ಕಹಳೆ ನ್ಯೂಸ್

ಬಂಟ್ವಾಳ : ರಾಜ್ಯ ಧಾರ್ಮಿಕ ಪರಿಷತ್ತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ತಂದೆ ಕಶೆಕೋಡಿ ಗುರುವಾಯುರಪ್ಪನ್ ಭಟ್ ಅವರು ಇಹಲೋಕ ತ್ಯಜಿಸಿದ್ದಾರೆ. ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಪ್ರಮಾಣದ ಬಂಧುಮಿತ್ರರನ್ನು ಅಗಲಿದ್ದಾರೆ....
ಗೋಕರ್ಣಶಿಕ್ಷಣಸುದ್ದಿ

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮೂಲಕ ಭಾರತೀಯ ಶಿಕ್ಷಣಕ್ಕೆ ಹೊಸದಿಕ್ಕು ; ಗುರುಕುಲಗಳ ಆನ್‍ಲೈನ್ ಶಿಕ್ಷಣಕ್ಕೆ ಚಾಲನೆ ನೀಡಿದ ರಾಘವೇಶ್ವರಭಾರತೀ ಮಹಾಸ್ವಾಮೀಜಿ – ಕಹಳೆ ನ್ಯೂಸ್

ಗೋಕರ್ಣ: ದೇಶ ಬೆಳಗಬೇಕು; ಭಾರತೀಯ ವಿದ್ಯೆ ಬೆಳೆಯಬೇಕು ಎಂಬ ಉದ್ದೇಶದಿಂದ ಭಾರತದ ಶಿಕ್ಷಣದಲ್ಲಿ ಭಾರತೀಯತೆಯನ್ನು ತುಂಬುವ ಮಹತ್ಕಾರ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುನ್ನುಡಿ ಬರೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಆನ್‍ಲೈನ್ ಶಿಕ್ಷಣಕ್ಕೆ ಚಾಲನೆ ನೀಡಿದ ಸಂದರ್ಭ ಸ್ವಾಮೀಜಿಯವರು ಸ್ವತಃ ಪ್ರಥಮ ಪಾಠ ಬೋಧಿಸಿದರು. ವಿಶ್ವದ ಎಲ್ಲೂ ಸಿಗದ ಪರಿಪೂರ್ಣ, ಅಪೂರ್ವ ಶಿಕ್ಷಣ ನಮ್ಮ ಯುವ ಜನಾಂಗಕ್ಕೆ ಸಿಗಬೇಕು ಎನ್ನುವುದೇ ವಿವಿವಿ...
ಸುದ್ದಿಸುಬ್ರಹ್ಮಣ್ಯ

ದೇವರ ದರ್ಶನಕ್ಕಷ್ಟೇ ಅವಕಾಶ, ದೇಗುಲದಲ್ಲಿ ಸೇವೆ ಇರಲ್ಲ, ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆ ನಿಷಿದ್ಧ!-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಎಲ್ಲ ದೇವಸ್ಥಾನಗಳಲ್ಲಿ ಯಾವುದೇ ಸೇವೆಗಳು ಆರಂಭಗೊಳ್ಳುವುದಿಲ್ಲ. ದೇವರ ದರ್ಶನ ಮಾಡಲಷ್ಟೇ ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಹಿಂದು ಧರ್ಮಾದಾಯ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಕ್ಕೆ ಕ್ಷೇತ್ರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವಸ್ಥಾನದಲ್ಲಿ ಸೇವೆ ಪುನರಾರಂಭದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಾರ್ವಜನಿಕವಾಗಿ...
ಬೆಳ್ತಂಗಡಿಸುದ್ದಿ

ಬೆಳ್ತಂಗಡಿ : -ಬರಾಯ ಕನ್ಯಾಡಿಯಲ್ಲಿ ನಿಧಿ ವದಂತಿ! ಬರಿಗೈಯಲ್ಲಿ ವಾಪಸ್ಸಾದ ತಂಡ-ಕಹಳೆ ನ್ಯೂಸ್

ಬೆಳ್ತಂಗಡಿ : ನಿಧಿ ಇದೆ ಎಂಬ ವದಂತಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ನಡೆದ ಶೋಧ ಕಾರ್ಯ ಮುಗಿಸಿ ಏನೂ ಸಿಗದೇ ಬರಿಗೈಯಲ್ಲಿ ವಾಪಸ್ಸಾದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿಯಲ್ಲಿ ಬುಧವಾರ ನಡೆದಿದೆ. ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿ ಎಂಬವರ ಜಮೀನಿನಲ್ಲಿ ನಿಧಿ ಲಭಿಸಿರುವ ಬಗ್ಗೆ ವದಂತಿಗಳು ಎದ್ದಿದು ಈ ವಿಷಯವಾಗಿ ಅಲ್ಲಿನ ಸ್ಥಳೀಯರು ಯಾರೋ ಜಾಗದ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕಳುಹಿಸಿದ್ದರು....
1 859 860 861 862 863 871
Page 861 of 871