ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆದ ದ್ವಿತೀಯ ಪಿಯುಸಿಯ ಆಂಗ್ಲಪರೀಕ್ಷೆ-ಕಹಳೆ ನ್ಯೂಸ್
ಪುತ್ತೂರು: ಕೋರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮವಾಗಿ ಬಾಕಿ ಉಳಿದ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯೂ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು. ಒಟ್ಟು 836 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು ಅದರಲ್ಲಿ 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಸುಮಾರು 104 ವಿದ್ಯಾರ್ಥಿಗಳು ಅವರವರ ಜಿಲ್ಲೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 39 ಕೊಠಡಿಗಳಲ್ಲಿ ಪರೀಕ್ಷೆಯು ನಡೆದಿತ್ತು. ಅಲ್ಲದೇ ಎಲ್ಲಾ ತರಗತಿ ಕೊಠಡಿಗಳಿಗೆ, ಹೊರಾಂಗಣಗಳಿಗೆ ಸ್ಯಾನಿಟೈಸರ್‌ನ್ನು ಯಂತ್ರದ ಮೂಲಕ ಸಿಂಪಡಿಸಿ...





